ಮಂಗಳೂರು: ಅನುದಾನಿತ ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ 2025 – 2026ನೇ ಸಾಲಿನ ಶೈಕ್ಷಣಿಕ ವರ್ಷದ ಯಕ್ಷಧ್ರುವ ಯಕ್ಷಶಿಕ್ಷಣ ಯಕ್ಷಗಾನ ತರಬೇತಿಯನ್ನು ಹಿಂದೂ ವಿದ್ಯಾದಾಯಿನೀ ಸಂಘದ ಅಧ್ಯಕ್ಷರಾದ ಜಯಚಂದ್ರ ಹತ್ವಾರ್ ಇವರು ಉದ್ಘಾಟಿಸಿದರು.

ಲೀಲಾಧರ ಶೆಟ್ಟಿ ಕಟ್ಲ, ಉಪಾಧ್ಯಕ್ಷರು ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಸುರತ್ಕಲ್ ಘಟಕ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಣಂಬೂರು ವಾಸುದೇವ ಐತಾಳ್ ಸಂಚಾಲಕರು ಯಕ್ಷಶಿಕ್ಷಣ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಎಮ್. ಜಿ. ರಾಮಚಂದ್ರ ಮುಕ್ಕ , ಜೊತೆ ಕಾರ್ಯದರ್ಶಿ ಹಿಂದೂ ವಿದ್ಯಾದಾಯಿನೀ ಸಂಘ, ಕಲಾವತಿ ಕೆ. , ಸಂಚಾಲಕರು ವೆಂಕಟರಮಣ ಶಾಲೆ, ಗೋಪಾಲ್ ವಿ. ಮುಖ್ಯೋಪಾಧ್ಯಾಯರು ಶ್ರೀ ವೆಂಕಟರಮಣ ಶಾಲೆ, ಭಾಸ್ಕರ್ ಕೆ. ಶಿಕ್ಷಕರು, ಪೂರ್ಣಿಮಾ ಯತೀಶ್ ರೈ ಯಕ್ಷ ಗುರುಗಳು, ಬಾಳ ಗಂಗಾಧರ ಪೂಜಾರಿ ಪ್ರಧಾನ ಕಾರ್ಯದರ್ಶಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಸುರತ್ಕಲ್ ಘಟಕ, ಹಿಂದೂ ವಿದ್ಯಾದಾಯಿನೀ ಸಂಘದ ಪದಾಧಿಕಾರಿಗಳು, ಶಾಲೆಯ ಸಹ ಸಹಶಿಕ್ಷಕರು ಉಪಸ್ಥಿತರಿದ್ದರು.