ಕುಲಾಲ ಸಂಘ ಮುಂಬಯಿ – ಮಹಿಳಾ ವಿಭಾಗದಿಂದ ಸೆ. 20ರಂದು “ನಮ್ಮ ಸಂಸ್ಕೃತಿ – ತುಳುವೆರೆ ಆಯನ” ಸಂಭ್ರಮ

0
39

ಸನ್ಮಾನ , ನೃತ್ಯ ರೂಪಕದ ಸ್ಪರ್ಧೆ.

ಮುಂಬಯಿ : ಕುಲಾಲ ಸಂಘ ಮುಂಬಯಿ ಮಹಿಳಾ ವಿಭಾಗದ ವತಿಯಿಂದ “ನಮ್ಮ ಸಂಸ್ಕೃತಿ – ತುಳುವೆರೆ ಆಯನ” ಎಂಬ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮವು ಭಾನುವಾರ, ಸೆಪ್ಟೆಂಬರ್ 20, 2026 ರಂದು ಬೆಳಗ್ಗೆ 9 ಗಂಟೆಯಿಂದ ದಾದರ್ ಪೂರ್ವದ ಹಿಂದೂ ಕಾಲೋನಿಯಲ್ಲಿರುವ ಪ್ರೊ. ಬಿ. ಎನ್. ವೈದ್ಯ ಸಭಾಗೃಹ (ಕಿಂಗ್ ಜಾರ್ಜ್ ಆಡಿಟೋರಿಯಂ) ನಲ್ಲಿ ಅದ್ದೂರಿಯಾಗಿ ಜರುಗಲಿದೆ. ಬೆಳಗ್ಗೆ 10 ಗಂಟೆಗೆ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ಸುಚಿತಾ ಡಿ. ಬಂಜನ್ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿರುವ ಸಮಾರಂಭದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ರಘು ಎ. ಮೂಲ್ಯ ವಹಿಸಲಿದ್ದು. ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ

ಚಿತ್ರಾ ರವಿರಾಜ್ ಶೆಟ್ಟಿ, ಸಮಾಜ ಸೇವಕಿ ಪ್ರಿಯದರ್ಶಿನಿ ಸುನಿಲ್ ಕುಲಾಲ್, ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್, ಸಮಾಜ ಸೇವಕಿ ದೇವಕಿ ಸುನಿಲ್ ಸಾಲಿಯಾನ್, ಸಮಾಜ ಸೇವಕಿ ನಮ್ರತಾ ಜಗದೀಶ್ ಬಂಜನ್, CIPYO ಪ್ರೈವೇಟ್ ಲಿನ ನಿರ್ದೇಶಕಿ, ಡಾ. ಸುರೇಖಾ ರತನ್ ಕುಲಾಲ್ ಪಾಲ್ಗೊಳ್ಳಲಿದ್ದಾರೆ,

ಮುಖ್ಯ ಬಾಷಣಕಾರರಾಗಿ ಚಿಣ್ಣರ ಬಿಂಬ ಟ್ರಸ್ಟ್‌ನ ಮುಖ್ಯ ಸಮನ್ವಯಕಿ ಗೀತಾ ರಘುರಾಮ ಹೇರಳ

ಅವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳೀಯ ಸಮಿತಿಯ 5 ಹಿರಿಯ ಮಹಿಳಾ ಸದಸ್ಯರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 2 ಗಂಟೆಯಿಂದ “ನಮ್ಮ ಸಂಸ್ಕೃತಿ” ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 5 ಸ್ಥಳೀಯ ಸಮಿತಿಗಳ ಮಹಿಳಾ ವಿಭಾಗದ ಸದಸ್ಯರಿಂದ ಕುಲಾಲ ಸಂಸ್ಕೃತಿ ವಿಷಯದ ಮೇಲೆ ನೃತ್ಯ ರೂಪಕ ಸ್ಪರ್ಧೆ ಏರ್ಪಡಿಸಲಾಗಿದೆ. ಜೊತೆಗೆ ಹಾಸ್ಯ, ಗಾಯನ ಮತ್ತು ಇತರ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 5.30 ಕ್ಕೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಎಲ್ಲಾ ಮಹಿಳಾ ಸದಸ್ಯರಿಂದ ಹಳದಿ-ಕುಂಕುಮ ಕಾರ್ಯಕ್ರಮ ನಡೆಯಲಿದೆ.

ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರೋತ್ಸಾಹಿಸಬೇಕಾಗಿ ಕುಲಾಲ ಸಂಘದ ಪರವಾಗಿ ಗೌರವ ಅಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್, ಉಪಾಧ್ಯಕ್ಷ ಡಿ.ಐ. ಮೂಲ್ಯ, ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲಿಯಾನ್, ಕೋಶಾಧಿಕಾರಿ ಜಯ ಎಸ್. ಅಂಚನ್, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ್ ಸಿ ಮೂಲ್ಯ ಮತ್ತು ಸುನಿಲ್ ಕೆ ಕುಲಾಲ್, ಜೊತೆ ಕೋಶಾಧಿಕಾರಿ ರೇಣುಕಾ ಎಸ್ ಸಾಲ್ಯಾನ್, ಮಹಿಳಾ ವಿಭಾಗದ ಪರವಾಗಿ ಉಪ ಕಾರ್ಯಾಧ್ಯಕ್ಷೆ ಕವಿತಾ ಸಿ. ಹಂಡ, ಕಾರ್ಯದರ್ಶಿ ನಯನಾ ಎನ್. ಬಂಗೇರ, ಕೋಶಾಧಿಕಾರಿ ಲತಾ ಎಸ್. ಮೂಲ್ಯ ಜೊತೆ ಕಾರ್ಯದರ್ಶಿ ಆರತಿ ಕೆ ಸಾಲ್ಯಾನ್, ಜೊತೆ ಕೋಶಾಧಿಕಾರಿ ಚಂದ್ರಾವತಿ ಎಸ್ ಸಾಲ್ಯಾನ್ ಮತ್ತು ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.