ಕಾಯರ್‌ಕಟ್ಟೆಯಲ್ಲಿ ಅ.4ರಂದು ಕುಲಾಲ ಸಂಘದ 22ನೇ ವಾರ್ಷಿಕ ಮಹಾಸಭೆ

0
22

ಮಂಜೇಶ್ವರ : ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.) ಪೈವಳಿಕೆ ಶಾಖೆಯ ವತಿಯಿಂದ ಸಂಘದ 22ನೇ ವಾರ್ಷಿಕ ಮಹಾಸಭೆ, ಗಣಪತಿ ಹವನ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಅ.4ರಂದು ಕಾಯರ್‌ಕಟ್ಟೆಯ ಕುಲಾಲ ಸಮಾಜ ಮಂದಿರದಲ್ಲಿ ನಡೆಯಲಿದೆ.

ಭಾನುವಾರ ಬೆಳಗ್ಗೆ 8 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಬಳಿಕ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಲಹೆ-ಸೂಚನೆಗಳನ್ನು ನೀಡುವಂತೆ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಮನವಿ ಮಾಡಿದ್ದಾರೆ.

ಬೆಳಗ್ಗೆ 8 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಬೆಳಗ್ಗೆ 9 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭವಾಗಲಿದೆ. ಬೆಳಗ್ಗೆ 10 ಗಂಟೆಗೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

10.30ಕ್ಕೆ ಸಭಾ ಕಾರ್ಯಕ್ರಮ

ಬೆಳಗ್ಗೆ 10.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ವೀಕ್ಷಿತಾ ವರವರಾಜ್ ಕೊಡಂದೂರು ಸ್ವಾಗತಿಸಲಿದ್ದಾರೆ ಪೂವಪ್ಪ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಉದಯ ಕುಮಾರ್ ತೆಂಕಮಜಲು ವರದಿ ವಾಚಿಸಲಿದ್ದು, ಸದಾನಂದ ಚಿಪ್ಪಾರು ಲೆಕ್ಕಪತ್ರ ಮಂಡಿಸಲಿದ್ದಾರೆ.

ಮುಖ್ಯ ಭಾಷಣವನ್ನು ಡಾ. ಲೋಕೇಶ್ ನಾರ್ಥ, ಉಪನ್ಯಾಸಕರು, ಸರಕಾರಿ ಪದವಿಪೂರ್ವ ಕಾಲೇಜು, ಮುನ್ನೂರು ಅವರು ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ರವೀಂದ್ರ ಮುನ್ನಿಪ್ಪಾಡಿ, ಪ್ರಕಾಶ್ ಎರುಗಲ್ಲು, ಶಾರದಾ ಕೆ., ಚಂದ್ರಶೇಖರ ಮೂಲ್ಯ ಹಾಗೂ ರೇವತಿ ಪರ್ಕೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು ಮಾತನಾಡಲಿದ್ದಾರೆ.

ಗಣ್ಯರ ಗೌರವ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಕೊರಗಪ್ಪ ಬಂದ್ರನ್ ಬರೋಡ, ಸದಾನಂದ ಮೀಂಜ ಕೋಡಂದೂರು, ಆನಂದ ಪೆರ್ಮುದೆ, ದಾಮೋದರ ಮಾಸ್ತರ್ ಕಬ್ಬಿನ ಹಿತ್ತಿಲು, ಬಾಲಕೃಷ್ಣ ದೀಕ್ಷಾ, ಡಾ. ಯೋಗಿಶ್ ಮಂಡಕಾಪು, ತೀನ ಮಾಸ್ತರ್, ಶ್ರೀ ರಾಮ ಮೂಲ್ಯ ಅಂಗಡಿಮಾರು ಹಾಗೂ ಶ್ರೀ ನಾರಾಯಣ ಕುಲಾಲ್ ಮೈಸೂರು ಸೇರಿದಂತೆ ಹಲವು ಗಣ್ಯರು ಗೌರವ ಉಪಸ್ಥಿತರಿರುವರು.

ಶ್ರೀಧರ ಬಾಯಾರು ಧನ್ಯವಾದ ಅರ್ಪಿಸಲಿದ್ದು, ಕವಿಗೋ ಕುಲಾಲ್ ಕಣಿಯೂರು ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಪ್ರತಿಭಾ ಕಾರಂಜಿ, ಯಕ್ಷಗಾನ ಪ್ರದರ್ಶನ

ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕುಲಾಲ ಯುವ ಪ್ರತಿಭೆಗಳಿಂದ ‘ಪ್ರತಿಭಾ ಕಾರಂಜಿ’ ಕಾರ್ಯಕ್ರಮದಲ್ಲಿ ವಿವಿಧ ವಿನೋದಾವಳಿಗಳು ನಡೆಯಲಿವೆ.

ಅಪರಾಹ್ನ 4 ಗಂಟೆಗೆ ಯಕ್ಷಗಾನ ಬಯಲಾಟ ‘ಆಗ್ರ ಪೂಜೆ’ ಪ್ರದರ್ಶನಗೊಳ್ಳಲಿದೆ. ಯಕ್ಷಗಾನವನ್ನು ಶ್ರೀ ನಾರಾಯಣ ಕುಲಾಲ್ ಗೋಳಿಮೂಲೆ ನಿರ್ದೇಶಿಸಲಿದ್ದಾರೆ.

ವಿವಿಧ ಕ್ರೀಡಾಕೂಟಗಳ ಆಯೋಜನೆ

ಮಹಾಸಭೆಯ ಅಂಗವಾಗಿ ಮಕ್ಕಳಿಂದ ಮಹಿಳೆಯರು ಹಾಗೂ ಪುರುಷರ ವರೆಗೆ ವಿವಿಧ ವಿಭಾಗಗಳಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಎಲ್‌ಕೆಜಿ, ಯುಕೆಜಿ, ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 100 ಮೀಟರ್, 200 ಮೀಟರ್ ಓಟ, ಲಿಂಬೆ ಚಮಚ, ಕಪ್ಪೆ ಜಿಗಿತ ಹಾಗೂ ಒಂಟಿ ಕಾಲಿನ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ.

ಮಕ್ಕಳಿಗಾಗಿ ಸಂಗೀತ ಕುರ್ಚಿ, ಬಾಲ್ ಪಾಸಿಂಗ್ ಸೇರಿದಂತೆ ಹಲವು ಮನರಂಜನಾ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗಿದೆ.

ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಸ್ಪರ್ಧೆ

ಮಹಿಳೆಯರ ವಿಭಾಗದಲ್ಲಿ 100 ಮೀಟರ್, 200 ಮೀಟರ್ ಓಟ, ಸಂಗೀತ ಕುರ್ಚಿ, ಕೆರೆ ದಡ ಆಟ ಹಾಗೂ ಬಾಲ್ ಪಾಸಿಂಗ್ ಸ್ಪರ್ಧೆಗಳು ನಡೆಯಲಿವೆ. ಪುರುಷರ ವಿಭಾಗದಲ್ಲಿ 100 ಮೀಟರ್, 200 ಮೀಟರ್ ಓಟ, ಕೆರೆ ದಡ ಆಟ, ಬಾಲ್ ಪಾಸಿಂಗ್ ಹಾಗೂ ಕೊಡಪಾನಕ್ಕೆ ಚೆಂಡು ಬಿಸಾಡುವುದು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಹಗ್ಗ ಜಗ್ಗಾಟದ ತಂಡವನ್ನು ಸ್ಥಳದಲ್ಲೇ ಆಯ್ಕೆ ಮಾಡಲಾಗುವುದು ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕ್ರೀಡಾಕೂಟಕ್ಕೆ ಹೆಸರು ನೋಂದಣಿ

ಕ್ರೀಡಾಕೂಟದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಲು ಪ್ರಸಾದ್ ಪೊನ್ನೆಂಗಳ – 9946208263 ಹಾಗೂ ದೀಕ್ಷಿತ್ ಕಾಯರ್‌ಕಟ್ಟೆ – 9964527275 ಅವರನ್ನು ಸಂಪರ್ಕಿಸಬಹುದು.

ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಪದಾಧಿಕಾರಿಗಳು ಕೋರಿದ್ದಾರೆ.