ಕುಂದಾಪುರ : ವಿವಾಹಿತ ಮಹಿಳೆ ನಾಪತ್ತೆ ಪ್ರಕರಣ, ಯುವಕನೊಂದಿಗೆ ಪರಾರಿ..!

0
941

ಕುಂದಾಪುರ: ಚರ್ಚ್ ರಸ್ತೆಯ ಕೋಡಿ ಸೇತುವೆ ಬಳಿ ಸ್ಕೂಟಿ ನಿಲ್ಲಿಸಿ ವಿವಾಹಿತ ಎರಡು ಮಕ್ಕಳ ತಾಯಿ ಹೀನಾ ಕೌಸರ್ ಬೆಳ್ಳಂಬೆಳ್ಳಗೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ವಡೇರ ಹೋಬಳಿ ಗ್ರಾಮದ ವಿಠಲವಾಡಿಯ ನಿವಾಸಿ ಹೀನಾ ಕೌಸರ್ ಆಕೆ ಸ್ಕೂಟಿಯನ್ನು ಸೇತುವೆಯ ಮೇಲಿಟ್ಟು, ನದಿಗೆ ಹಾರಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು, ಸ್ಕೂಟಿಯಲ್ಲಿ ಡೆತ್‌ ನೋಟ್ ಕೂಡ ಪತ್ತೆಯಾಗಿತ್ತು. ಅಲ್ಲದೆ ಆಕೆಯ ಚಪ್ಪಲಿ ಕೂಡಾ ಸೇತುವೆಯಲ್ಲಿ ಪತ್ತೆಯಾಗಿತ್ತು.

ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೂ ಕುಂದಾಪುರ ಪೊಲೀಸರ ನೇತೃತ್ವದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ನದಿಯಲ್ಲಿ ದೋಣಿಯ ಮೂಲಕ ಹುಡುಕಾಟ ಕಾರ್ಯಾಚರಣೆ ನಡೆದಿತ್ತು. ಆದರೆ ಇದೀಗ ಮಹಿಳೆ ವಿವಾಹಿತನೊಂದಿಗೆ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಕುಂದಾಪುರದ ಫುಡ್ ಮಾರ್ಕ್ ಹೋಟೆಲಿನಲ್ಲಿ ಕೆಲಸ ಮಾಡಿಕೊಂಡಿರುವ ವಿವಾಹಿತ ಸಾಹಿಲ್ (27) ಜೊತೆ ಎರಡು ಮಕ್ಕಳ ತಾಯಿ ಹೀನಾ ಕೌಸರ್ (33) ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಮಹಿಳೆಯ ಪತಿ ವಿದೇಶದಲ್ಲಿದ್ದು ತನ್ನ ಎರಡು ಮಕ್ಕಳು ಮತ್ತು ತಾಯಿಯೊಂದಿಗೆ ಮಹಿಳೆ ವಾಸವಾಗಿದ್ದಳು. ಹೀನಾ ಕೌಸರ್ ಹಾಗೂ ಸಾಹಿಲ್ ನಾಪತ್ತೆಯಾಗಿರುವ ಬಗ್ಗೆ, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here