Saturday, June 14, 2025
HomeUncategorizedದೀಪಾ ಭಾಸ್ತಿಗೆ ಕೊಡಗು ಕನ್ನಡ ಭವನದ ಅಭಿನಂದನೆ ಸಮಾರಂಭ

ದೀಪಾ ಭಾಸ್ತಿಗೆ ಕೊಡಗು ಕನ್ನಡ ಭವನದ ಅಭಿನಂದನೆ ಸಮಾರಂಭ

ಬೂಕರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ದೀಪಾ ಭಾಸ್ತಿ ಅವರನ್ನು ಇಂದು ಕೊಡಗು ಕನ್ನಡ ಭವನ ಸಮಿತಿಯ ಪದಾಧಿಕಾರಿಗಳು ಬೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಆದ ಶ್ರೀಯುತ ಧರ್ಮ ಸರ್ ಇವರು ಕೂಡ ನಮ್ಮೊಂದಿಗೆ ಸಾಥ್ ನೀಡಿ , ಪ್ರಶಸ್ತಿ ಪಡೆದ ದೀಪಾ ಭಾಸ್ತಿ ಅವರಿಗೆ ಹೃದಯಸ್ಪರ್ಶಿ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಪ್ರಶಸ್ತಿಯ ಹೆಮ್ಮೆ ಕೊಡಗು ಜಿಲ್ಲೆಗೆ ಮಾತ್ರವಲ್ಲ, ಬದಲಾಗಿ ಇಡೀ ಭಾರತ ದೇಶಕ್ಕೆ ಹೆಮ್ಮೆ ಎಂಬುದಾಗಿ ಕುಲಪತಿಗಳಾದ ಶ್ರೀಯುತ ಧರ್ಮ ಅವರು ಖುಷಿಯಿಂದ ನುಡಿದರು. ನಮ್ಮೆಲ್ಲರನ್ನೂ ಪ್ರೀತಿಯಿಂದ ಆತಿಥ್ಯ ನೀಡಿ, ಪ್ರೀತಿಯಿಂದ ಕುಟುಂಬ ಸಹಿತವಾಗಿ ಬಂದು ಮಾತನಾಡಿಸಿದರು. ನಿಜಕ್ಕೂ ಇದೊಂದು ಹೆಮ್ಮೆಯ ಸಂಗತಿ.

ಈ ಸಂದರ್ಭದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀಯುತ ಧರ್ಮ, ಕೊಡಗು ಕನ್ನಡ ಭವನದ ಅಧ್ಯಕ್ಷರಾದ ಶ್ರೀಯುತ ಬೊಳ್ಳಜಿರ ಬಿ.ಅಯ್ಯಪ್ಪ, ಕನ್ನಡ ಭವನದ ಪ್ರಧಾನ ಕಾರ್ಯದರ್ಶಿಯಾದ ಚಂದನ್ ನಂದರುಬೆಟ್ಟು, ಕೊಡಗು ಕನ್ನಡ ಭವನದ ನಿರ್ದೇಶಕರಾದ ಅರುಣ್ ಕುಮಾರ್. ಪಿ. ಹಾಜರಿದ್ದರು.

RELATED ARTICLES
- Advertisment -
Google search engine

Most Popular