ಕುರಾಲ್ ಕಲಾವಿದೆರ್ ಬೆದ್ರ ತಂಡದ ನೂತನ ನಾಟಕ ಬಿಡುಗಡೆ :* “ಅಪ್ಪೆ” ನಾಟಕ ಲೋಕಾರ್ಪಣೆ

0
13

ಮೂಡುಬಿದಿರೆ : ಪ್ರಸಾದ್ ಆಳ್ವ ಸಾರಥ್ಯದ ಕುರಾಲ್ ಕಲಾವಿದೆರ್ ಬೆದ್ರ ತಂಡವು ಕಳೆದೆರಡು ವರ್ಷಗಳಲ್ಲಿ “ಯೇರ್” ಮತ್ತು “ತೀರ್ಥ” ತುಳು ನಾಟಕಗಳ ಮೂಲಕ ಕಲಾಭಿಮಾನಿಗಳ ಮನ ಗೆದ್ದಿತ್ತು. ಇದೀಗ ಮತ್ತೊಮ್ಮೆ ಕಲಾಭಿಮಾನಿಗಳನ್ನು ರಂಜಿಸಲು ಅಣಿಯಾಗಿರುವ ಕುರಾಲ್ ಕಲಾವಿದೆರ್ ಬೆದ್ರ ತಂಡದ ಈ ವರ್ಷದ ನೂತನ ಸತ್ಯಾಧಾರಿತ ಭಕ್ತಿಪ್ರಧಾನ ನಾಟಕ “ಅಪ್ಪೆ” ಇದರ ಶುಭಮುಹೂರ್ತ ಮತ್ತು ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಶಾರದಾಂಬ ವಿದ್ಯಾಪೀಠ ಶೃಂಗೇರಿಯಲ್ಲಿ ಜೂನ್ 28 ರಂದು ನೆರವೇರಿತು.

ಈ ವೇಳೆ ತಂಡದ ಸಾರಥಿ ಪ್ರಸಾದ್ ಆಳ್ವ ಪಡುಕೊಣಾಜೆ, ತಂಡದ ಸಮಗ್ರ ನಿರ್ವಾಹಕಿ ಬಾಲಿಕ ಪ್ರಸಾದ್ ಪಡುಕೊಣಾಜೆ, ಅಪ್ಪೆ ನಾಟಕದ ಬರಹಗಾರ ಮತ್ತು ನಿರ್ದೇಶಕ ಯೋಗೀಶ್ ಪೂಜಾರಿ ಪೇರಲ್ಕೆ ಹಾಗೂ ಅಪ್ಪೆ ನಾಟಕದ ಕಲಾವಿದರು ಉಪಸ್ಥಿತರಿದ್ದರು.

ತುಳುನಾಡಿನ ಸತ್ಯ ಘಟನೆಯೊಂದನ್ನು ಮೂಲವಾಗಿರಿಸಿಕೊಂಡು ಹೆಣೆದಿರುವ ಈ ನಾಟಕದಲ್ಲಿ ತುಳುನಾಡಿನ ಪ್ರತಿ ಮನೆಯಲ್ಲೂ ಆರಾಧಿಸಿಕೊಂಡು ಬಂದಿರುವ ಮಂತ್ರದೇವತೆ ದೈವದ ಕಾರ್ಣಿಕ ಶಕ್ತಿಯ ದರ್ಶನವಾಗಲಿದೆ. ಅದ್ದೂರಿ ರಂಗವಿನ್ಯಾಸದೊಂದಿಗೆ ಮೂಡಿಬರಲಿರುವ ಈ ನಾಟಕದಲ್ಲಿ ದೈವಿಕ ಅಂಶಗಳ ಜೊತೆಗೆ ಹಾಸ್ಯದ ಚಟಾಕಿಯು ಇದ್ದು ಜನರಿಗೆ ಮನೋರಂಜನೆಗೆ ಯಾವುದೇ ಕೊರತೆಯಿಲ್ಲ.

ಪ್ರದರ್ಶನಗಳಿಗೆ ಸಂಪರ್ಕಿಸಿ : 9606122429,9880873953

LEAVE A REPLY

Please enter your comment!
Please enter your name here