ಮೂಡಬಿದ್ರೆ ತಾಲೂಕಿನ ತೋಡಾರು ಗ್ರಾಮದ ಬಂಗಬೆಟ್ಟು ಶಾಲೆಯ ಹಿಂಭಾಗದ ಗುಡ್ಡದಲ್ಲಿ ಕಸಾಯಿ ಖಾನೆಗೆ ಒಯ್ಯಲು ಹಿಂಸಾತ್ಮಕವಾಗಿ ಎರಡು ಗೋವುಗಳನ್ನು ಎಲ್ಲಿಂದಲೂ ಕದ್ದು ತಂದು ಗುಡ್ಡದಲ್ಲಿ ಕಟ್ಟಿ ಹಾಕಲಾಗಿತ್ತು ಬೆಳಗ್ಗೆ ಸುಮಾರು 6 ಗಂಟೆಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಗಮನಕ್ಕೆ ಬಂದಿದ್ದು ಕೂಡಲೇ ಸ್ಥಳಕ್ಕೆ ತೆರಳಿ ಎರಡು ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿ ಅವುಗಳನ್ನು ಗೋಶಾಲೆಗೆ ಸಾಗಿಸಲಾಯಿತು. ಪೊಲೀಸ್ ಇಲಾಖೆ ಗೋವುಗಳನ್ನು ಕಟ್ಟಿ ಹಾಕಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆಯ ಮೂಡಬಿದ್ರೆ ತಾಲೂಕು ಸಹಸಂಯೋಜಕ ಶರತ್ ಮಿಜಾರ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ಮನೀಶ್ ಮಿಜಾರ್, ಸುನಿಲ್, ಪ್ರವೀಣ್ ಮಿಜಾರ್, ಪ್ರಸಾದ್ ಮಿಜಾರ್ ಉಪಸ್ಥಿತರಿದ್ದರು
ಕದ್ದು ತಂದು ಗುಡ್ಡದಲ್ಲಿ ಕಟ್ಟಿ ಹಾಕಿದ ಗೋವುಗಳನ್ನು ರಕ್ಷಿಸಿದ ಹಿಂದೂ ಜಾಗರಣ ವೇದಿಕೆ – ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
RELATED ARTICLES