ರಶ್ಮಿ ಸಾಮಂತ್ ನೇತೃತ್ವ ಜಿಲ್ಲೆಯಾದ್ಯoತ ಯುವ ಮಹಿಳಾ ಶಕ್ತಿಯ ಕ್ರೋಡೀಕರಣಕ್ಕೆ ನಾಂದಿ ಹಾಡುವಂತಾಗಲಿ : ಕುತ್ಯಾರು ನವೀನ್ ಶೆಟ್ಟಿ

0
6

ಉಡುಪಿ ಜಿಲ್ಲಾ ಬಿಜೆಪಿಯಿಂದ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ರಶ್ಮಿ ಸಾಮಂತ್​ ಮಣಿಪಾಲ ಅವರಿಗೆ ಗೌರವಾರ್ಪಣೆ

ಬಿಜೆಪಿ ಯುವ ಮೋರ್ಚಾ ನೆಲೆಯಲ್ಲಿ ರಶ್ಮಿ ಸಾಮಂತ್ ಅವರ ಮೂಲಕ ಉಡುಪಿ ಜಿಲ್ಲೆಗೆ ರಾಷ್ಟ್ರೀಯ ಮಟ್ಟದಲ್ಲಿ ಒಂದು ಒಳ್ಳೆಯ ನಾಯಕತ್ವ ದೊರೆತಿರುವುದು ಹೆಮ್ಮೆ ತಂದಿದೆ. ಜಿಲ್ಲೆಯಲ್ಲಿ ಯುವ ಶಕ್ತಿಯನ್ನು ಸಂಘಟಿಸಲು ಹೆಚ್ಚಿನ ಶಕ್ತಿ ಬಂದಂತಾಗಿದೆ. ವಿಚಾರ, ಚಟುವಟಿಕೆ ಮತ್ತು ದೂರದರ್ಶಿತ್ವದ ಚಿಂತನೆಯಿಂದ ಅವಕಾಶಗಳನ್ನು ನೀಡುವುದು ಬಿಜೆಪಿಯ ವಿಶೇಷತೆ. ರಶ್ಮಿ ಸಾಮಂತ್ ಅವರ ನೇತೃತ್ವ ಜಿಲ್ಲೆಯಾದ್ಯoತ ಯುವ ಮಹಿಳಾ ಶಕ್ತಿಯ ಕ್ರೋಡೀಕರಣಕ್ಕೆ ನಾಂದಿ ಹಾಡುವಂತಾಗಲಿ. ಯುವ ಮೋರ್ಚಾ ಹೊಸ ಸ್ಫೂರ್ತಿಯೊಂದಿಗೆ ಪಕ್ಷ ಸಂಘಟನೆಗೆ ಹೆಚ್ಚಿನ ಶಕ್ತಿ ತುಂಬುವoತಾಗಲಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.

ಅವರು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ ನೇಮಕಗೊಂಡು ಬಿಜೆಪಿ ಜಿಲ್ಲಾ ಕಛೇರಿಗೆ ಭೇಟಿ ನೀಡಿದ ಯುವ ಚಿಂತಕಿ ಹಾಗೂ ಲೇಖಕಿ ರಶ್ಮಿ ಸಾಮಂತ್ ಮಣಿಪಾಲ ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಶಾಲು ಹೊದೆಸಿ ಗೌರವಿಸಿ, ಅಭಿನಂದಿಸಿ ಮಾತನಾಡಿದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಗೌರವಾರ್ಪಣೆಗೈದು ಮಾತನಾಡಿ, ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ ರಶ್ಮಿ ಸಾಮಂತ್ ಅವರು ಉಡುಪಿ ಮೂಲದಿಂದ ಆಯ್ಕೆಯಾಗಿರುವುದು ಸಂತಸ ತಂದಿದೆ. ಭವಿಷ್ಯದಲ್ಲಿ ಯುವತಿಯರು ಕೂಡಾ ಯುವ ಮೋರ್ಚಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸಂಘಟಿತ ಪ್ರಯತ್ನ ಮಾಡುವ ಜೊತೆಗೆ ಸದೃಢ ಪಕ್ಷ ಸಂಘಟನೆಗೆ ಒತ್ತು ನೀಡೋಣ ಎಂದರು.

ಗೌರವ ಸನ್ಮಾನವನ್ನು ಸ್ವೀಕರಿಸಿದ ರಶ್ಮಿ ಸಾಮಂತ್ ಅವರು ಮಾತನಾಡಿ ಸಂಘ-ಸಂಘಟನೆಯ ದೃಷ್ಠಿಯಿಂದ ಉಡುಪಿ ಒಂದು ಐತಿಹಾಸಿಕ ಕ್ಷೇತ್ರ. ವಿಶ್ವದಲ್ಲಿ ಅತಿ ಹೆಚ್ಚು ಯುವ ಶಕ್ತಿ ಇರುವ ದೇಶ ಭಾರತ. ದೇಶ ಮೊದಲು ಎಂಬ ಚಿಂತನೆಯಲ್ಲಿ ದೇಶ ಕಟ್ಟುವಲ್ಲಿ ಯುವಕ ಯುವತಿಯರ ಪಾತ್ರ ಬಹಳ ಪ್ರಾಮುಖ್ಯತೆ ಹೊಂದಿದೆ. ಬಿಜೆಪಿ ಯುವ ಮೋರ್ಚಾದಲ್ಲಿ ಯುವತಿಯರನ್ನೂ ಸಕ್ರಿಯವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಜೊತೆಗೆ ಯುವ ಶಕ್ತಿಯೊಂದಿಗೆ ಪಕ್ಷ ಸಂಘಟನೆಗೆ ಅತ್ಯಮೂಲ್ಯ ಕೊಡುಗೆ ನೀಡೋಣ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ್ ನಾಯಕ್, ಉಡುಪಿ ನಗರಾಧ್ಯಕ್ಷ ದಿನೇಶ್ ಅಮಿನ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿಗಳಾದ ಗಿರೀಶ್ ಎಂ. ಅಂಚನ್, ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಕುಂದರ್, ಅಭಿರಾಜ್ ಸುವರ್ಣ, ಬಿಜೆಪಿ ಉಡುಪಿ ನಗರ ಉಪಾಧ್ಯಕ್ಷ ಕಿಶೋರ್ ಕುಮಾರ್ ಕರಂಬಳ್ಳಿ, ಕಾರ್ಯದರ್ಶಿ ಗುರುರಾಜ್ ಭಂಡಾರಿ, ಉಡುಪಿ ನಗರ ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ನಿತಿನ್ ಪೈ ಸಹಿತ ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.