ರಘು ಇಡ್ಕಿದು ರವರ ಹೊಸ ಕೃತಿ ” ಕೃತಿ ಸಂಸ್ಕೃತಿ” ಬಿಡುಗಡೆ ಸಮಾರಂಭ

0
30

ಮಂಗಳೂರು : ವಿದ್ಯಾ ಪ್ರಕಾಶನ ಮಂಗಳೂರು, ಅರೆಹೊಳೆ ಪ್ರತಿಷ್ಠಾನ ಮತ್ತು ಬಹು ಓದು ಬಳಗ ಮಂಗಳೂರು ಇವುಗಳ ಆಶ್ರಯದಲ್ಲಿ ರಘು ಇಡ್ಕಿದು ರವರ 34ನೇ ಪುಸ್ತಕ “ಕೃತಿ ಸಂಸ್ಕೃತಿ” ( ಲೇಖನಗಳ ಸಂಕಲನ) ಬಿಡುಗಡೆ ಸಮಾರಂಭವು ದಿನಾಂಕ: 12-09-2026, ಶನಿವಾರ ಅಪರಾಹ್ನ 3:00ಗಂಟೆಗೆ ತುಳು ಭವನ, ಡಾ.ವಾಮನ ನಂದಾವರ ಚಾವಡಿ, ಉರ್ವಸ್ಟೋರ್ ಮಂಗಳೂರು ಇಲ್ಲಿ ನಡೆಯಲಿದೆ.

ಕೃತಿ ಬಿಡುಗಡೆಯನ್ನು ಡಾ. ಶ್ರೀನಿವಾಸ ಗಿಳಿಯಾರು ವಿಮರ್ಶಕರು,ಶಾಖಾಧಿಕಾರಿಗಳು ಕರ್ನಾಟಕ ಸರ್ಕಾರದ ಸಚಿವಾಲಯ ಬೆಂಗಳೂರು ಇವರು ನಡೆಸಿಕೊಡಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ತಾರಾನಾಥ ಗಟ್ಟಿ ಕಾಪಿಕಾಡು ಅಧ್ಯಕ್ಷರು,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರು ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಪ್ರೊ. ಪಿ ಕೃಷ್ಣಮೂರ್ತಿ ನಿವೃತ್ತಪ್ರಾಂಶುಪಾಲರು, ಗೋವಿಂದ ದಾಸ ಕಾಲೇಜು ಸುರತ್ಕಲ್ ಮತ್ತು ಅರೆಹೊಳೆ ಸದಾಶಿವರಾವ್ ಅಧ್ಯಕ್ಷರು, ಅರೆಹೊಳೆ ಪ್ರತಿಷ್ಠಾನ ಇವರು ಭಾಗವಹಿಸಲಿದ್ದಾರೆ.