“ತುಳುನಾಡ ಸಗ್ತಿ ಕೊರಗಜ್ಜೆ” ಹಾಗೂ “ಜಾತ್ರೆ ಕಂಡದಲ್ಪ” ಹಾಡುಗಳ ಲೋಕಾರ್ಪಣೆ

0
29

ಮಂಗಳೂರು: ವಿ.ಆರ್.ವಿ ಕ್ರಿಯೇಶನ್ಸ್ ಮಂಗಳೂರು ನಿರ್ಮಿಸಿರುವ ವಿನಮ್ರ ಇಡ್ಕಿದು ಹಾಡಿರುವ, ರಘು ಇಡ್ಕಿದು ರವರ ಸಾಹಿತ್ಯವಿರುವ “ತುಳುನಾಡ ಸಗ್ತಿ ಕೊರಗಜ್ಜೆ” ಮತ್ತು “ಜಾತ್ರೆ ಕಂಡದಲ್ಪ….”ಎರಡು ತುಳುವಿನ ಹೊಸ ಹಾಡುಗಳ ಬಿಡುಗಡೆ ದಿನಾಂಕ 30-7 2026ರಂದು ಮಂಗಳೂರಿನಲ್ಲಿ ನಡೆಯಿತು.
“ಜಾತ್ರೆ ಕಂಡದಲ್ಪ” ಹಾಡನ್ನು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯದ ಪ್ರಾಧ್ಯಾಪಕರಾದ ಡಾ. ಉದಯಕುಮಾರ್ ಸಿ.ಆರ್ ಬಿಡುಗಡೆಗೊಳಿಸಿದರು.
“ತುಳುನಾಡ ಸಗ್ತಿ ಕೊರಗಜ್ಜೆ” ಹಾಡನ್ನು ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ವೈಶಾಲಿ ಯು ಬಿಡುಗಡೆಗೊಳಿಸಿದರು. ದೃಶ್ಯ ಪರಿಕಲ್ಪನೆ / ಸಂಕಲನ: ವಿದ್ಯಾ ಯು, ಧ್ವನಿ ಮುದ್ರಣ : ಜಯಕುಮಾರ್ ಪಿ.ಕೆ. , ಸನ್ ಮ್ಯಾಟ್ರಿಕ್ ಸ್ಟುಡಿಯೋ ಮಂಗಳೂರು ಮಿಕ್ಸಿಂಗ್ & ಮಾಸ್ಟ್ರಿoಗ್ : ಮಹಮ್ಮದ್‌ ಫೈಜ್, ಮಂಗಳೂರು – ಇವರುಗಳು ನಿರ್ವಹಿಸಿರುತ್ತಾರೆ.