ಮುಂಬೈಯಲ್ಲಿ “ವೇಳ್ ಘಡಿ” ಚಿತ್ರದ ಟ್ರೈಲರ್ ಹಾಗೂ ಜೋನ್ ವಿಲ್ಸನ್ ಲೋಬೋ ಅವರ “ಲೋಬೋ ಪ್ರೋಡಕ್ಷನ್” ಲೋಕಾರ್ಪಣೆ

0
36

ಕೊಂಕಣಿ ಭಾಷಾಭಿಮಾನಕ್ಕೆ ಹೊಸ ಸ್ಫೂರ್ತಿ: ಜೆನೆವೀವ್ ಪಿ. ವಾಸ್

ಮುಂಬೈ: ಮಾಯಾನಗರಿ ಮುಂಬೈಯಲ್ಲಿ ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಕಲೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ನೂತನವಾಗಿ ನಿರ್ಮಾಣವಾಗಿರುವ “ವೇಳ್ ಘಡಿ” ಕೊಂಕಣಿ ಚಲನಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಸಮಾಜ ಸೇವಕ ಜೋನ್ ವಿಲ್ಸನ್ ಲೋಬೋ ಅವರ ಸಾರಥ್ಯದ “ಲೋಬೋ ಪ್ರೊಡಕ್ಷನ್” ಸಂಸ್ಥೆಯ ಉದ್ಘಾಟನೆ ಅದ್ದೂರಿಯಾಗಿ ನಡೆಯಿತು.

ಅಂಧೇರಿ ಪೂರ್ವದ ಸಾಕಿನಾಕದಲ್ಲಿರುವ ಶುಕ್ರಾನ್ ಲಾಂಜ್ ಬ್ಯಾಂಕ್ವೆಟ್‌ನಲ್ಲಿ ಸ್ವರ್ಗೀಯ ಸಂಗೀತ ಸಾಮ್ರಾಟ್ ಹೆನ್ರಿ ಡಿ’ಸೋಜಾ ವೇದಿಕೆಯಲ್ಲಿ ನಡೆದ ೩೪ನೇ ಕೊಂಕಣಿ ಮಾನ್ಯತಾ ದಿವಸ್ ಅಂಗವಾಗಿ “ಸ್ಫೂರ್ತಿದಾಯಕ ಸ್ವಾಭಿಮಾನದ ಕೊಂಕಣಿ ಸಂಜೆ” ಕಾರ್ಯಕ್ರಮದಲ್ಲಿ ವಿಭಿನ್ನವಾಗಿ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ, ಬಾಂಬೆ ಹೈಕೋರ್ಟ್ ವಕೀಲೆ ಹಾಗೂ ಮೆ| ಪಿ. ವಾಸ್ & ಕಂಪನಿಯ ಪಾಲುದಾರೆ ಅಡ್ವೊಕೇಟ್ ಜೆನೆವೀವ್ ಪಿ. ವಾಸ್ ಅವರು, ಮಾತನಾಡಿ, ಚಲನಚಿತ್ರಗಳು ಭಾಷಾಭಿಮಾನದ ಜಾಗೃತಿಗೆ ಪೂರಕವಾಗಿವೆ. ಕೊಂಕಣಿ ಸಿನಿರಸಿಕರನ್ನು ಒಂದೆಡೆ ಸೇರಿಸಿ ಭಾಷಾಭಿಮಾನವನ್ನು ಮೆರೆಯುತ್ತಿರುವುದು ಸ್ತುತ್ಯರ್ಹ. ಇದು ಕೊಂಕಣಿ ಭಾಷೆಯ ವೈಭವ ಮತ್ತು ಸಾಂಸ್ಕೃತಿಕ ಹಿರಿಮೆಯ ಪ್ರತೀಕವಾಗಿದೆ. ಮಾತೃಭಾಷೆಯ ಪರಂಪರೆಯನ್ನು ಜೀವಂತವಾಗಿರಿಸಲು ಹಾಗೂ ಕೊಂಕಣಿ ಚಿತ್ರರಂಗದ ಬೆಳವಣಿಗೆಗೆ ಪ್ರೋತ್ಸಾಹ ನೀಡುವಲ್ಲಿ ಚಿತ್ರ ಪ್ರದರ್ಶನಗಳು ಮಹತ್ವದ ಸೇತುವೆಯಾಗಿವೆ. “ವೇಳ್ ಘಡಿ” ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ಇತಿಹಾಸದ ಪುಟ ಸೇರುವಂತಾಗಲಿ ಎಂದು ಶುಭ ಹಾರೈಸಿದರು.

ಡೈಜಿವರ್ಲ್ಡ್ ಹಾಗೂ ವಿಷನ್ ಕೊಂಕಣಿ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಜನ್ ಹಿಂದಿ ಸಿನಿಮಾದ ನಿರ್ಮಾಪಕ ಲಾರೆನ್ಸ್ ಡಿಸೋಜಾ, ಹ್ಯಾರಿ ಫೆರ್ನಾಂಡಿಸ್, ಡೈಜಿವರ್ಲ್ಡ್ ಫೌಂಡರ್ ವಾಲ್ಟರ್ ನಂದಳಿಕೆ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಯುವ ಲೇಖಕ ಹಾಗೂ ಕಲಾ ನಿರ್ದೇಶಕ ಸ್ಟ್ಯಾನಿ ಬೇಳಾ, ಮೈಕಲ್ ಡಿ’ಸೋಜಾ, “ವೇಳ್ ಘಡಿ” ಸಿನಿಮಾದ ನಿರ್ಮಾಪಕ ಜೋನ್ ವಿಲ್ಸನ್ ಲೋಬೊ, ಪ್ರೊಡಕ್ಷನ್ ಮ್ಯಾನೇಜರ್ ರೋನ್ಸ್ ಬಂಟ್ವಾಳ, ಸಹ ನಿರ್ಮಾಪಕ ಆಲ್ವಿನ್ ಸಿಕ್ವೇರ, ಕಥೆ ಹಾಗೂ ಸಹ ನಿರ್ದೇಶಕ ಸೋನುಲವಿ ಸಿನೇ ಕ್ರಿಯೇಶನ್‌ನ ಪ್ರವರ್ತಕ ರೋಷನ್ ನೆಲ್ಲಿಗುಡ್ಡೆ, ಸಿನಿಮಾದ ಛಾಯಾಗ್ರಾಹಕರಾದ ಫೆಸ್ವಿತ್ ಡಿಸೋಜ ಹಾಗೂ ರಾಯನ್ ಡಿಸೋಜ. ಸಹಾಯಕ ನಿರ್ದೇಶಕಿ ಲವೀನ ಬೆಳ್ಮಣ್. ಕಲಾವಿದರಾದ ಜಾಸ್ಲೀನ್ ನೋರೋನ್ಹಾ ಶಿರ್ವಾ. ಲೂವಿಸ್ ಪಿಂಟೋ ಕಟೀಲು. ಮೊನೀಕಾ ಅಂದ್ರಾದೆ ಬೆಳ್ಮಣ್. ಲಿಯೋ ರಾಣಿಪುರ. ಸುನಿಲ್ ನೆಲ್ಲಿಗುಡ್ಡೆ. ವಿಲ್ಫೆಡ್ ಕೊಲ್ಲೂರು. ನರೇಂದ್ರ ಕೆರೆಕಾಡು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ “ವೇಳ್ ಘಡಿ” ಚಿತ್ರದ ಟ್ರೈಲರ್ ಬಿಡುಗಡೆಗೊಳಿಸುವುದರ ಜೊತೆಗೆ “ಲೋಬೋ ಪ್ರೊಡಕ್ಷನ್” ಸಂಸ್ಥೆಯನ್ನೂ ಅಧಿಕೃತವಾಗಿ ಲೋಕಾರ್ಪಣೆಗೊಳಸಿಲಾಯಿತು. ಕೊಂಕಣಿ ಭಾಷೆ, ಕಲೆ ಮತ್ತು ಸಂಸ್ಕೃತಿಯ ಅಭಿಮಾನಿಗಳು ಹಾಗೂ ಚಿತ್ರರಸಿಕರ ಉತ್ಸಾಹಭರಿತ ವಾತಾವರಣದಲ್ಲಿ ಅದ್ದೂರಿಯಾಗಿ ನಡೆದು, “ವೇಳ್ ಘಡಿ” ಸಿನಿಮಾದ ಟ್ರೇಲರ್ ಜನಾಕರ್ಷಣೆ ಪಡೆಯಿತು. ಮುಂದಿನ ನವೆಂಬರ್ ಅಥವ ಡಿಸೆಂಬರ್‌ನಲ್ಲಿ ಸಿನಿಮಾವನ್ನು ತೆರೆಗೆ ತರುವ ಬಗ್ಗೆ ಪ್ರಕಟಿಸಲಾಯಿತು.