ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ.ಸುನೀಲ್ ಕುಮಾರ್ ರವರಿಗೆ ಮನವಿ ನೀಡಿದ ವಿವಿಧ ದಲಿತ ಸಂಘಟನೆಗಳ ನಾಯಕರು

0
37

ಕಾರ್ಕಳ : ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಸದಸ್ಯರ ಅನಧಿಕೃತ ಆಯ್ಕೆಯಾದ ಕುರಿತು ತಾಲೂಕು ದಲಿತ ಸಂಘಟನೆಗಳ ನಾಯಕರುಗಳಿಂದ ಶಾಸಕರಿಗೆ ಮನವಿ ನೀಡಲಾಯಿತು.ಮನವಿಯಲ್ಲಿ ನಿರ್ವಹಣಾ ಸಮಿತಿಯ ಸದಸ್ಯರನ್ನು ಅನರ್ಹಗೊಳಿಸಿ ಹೊಸದಾಗಿ ಸಮಿತಿ ರಚಿಸುವಂತೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ನಾಯಕರುಗಳಾದ ಗೋವರ್ಧನ್ ರಾಣೆ, ಸುಧಾಕರ್ ದಾನಶಾಲೆ, ಹರೀಶ್ ಬಜಗೋಳಿ, ಸುಹಾಸ್ ಮುಡಾರು, ರಮೇಶ್ ಜರಿಗುಡ್ಡೆ, ಸುನೀತಾ ಅಂಡಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here