
-ಮಂದಾರ ರಾಜೇಶ್ ಭಟ್
ಬೆಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಗಾಯತ್ರಿ ಭವನದಲ್ಲಿ ನಡೆದ ‘ಶ್ರೀ ವಿದ್ಯಾಗಣಪತಿ ಮಹೋತ್ಸವ’ದ ಅಂಗವಾಗಿ ವಿವಿಧ ಕ್ಷೇತ್ರಗಳ ವಿಪ್ರ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಾಸಭಾದ ಅಧ್ಯಕ್ಷ ಎಸ್. ರಘುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಕಲೆ, ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿಯ ಸಂರಕ್ಷಣೆಗೆ ಮಹಾಸಭೆ ಸತತವಾಗಿ ಪ್ರೋತ್ಸಾಹ ನೀಡುತ್ತಿದೆ.

ಪ್ರತಿ ತಿಂಗಳ ಕೊನೆಯ ಶುಕ್ರವಾರ ನಾಡಿನ ಸಾಧಕರಿಗೆ ಸನ್ಮಾನ ಹಾಗೂ ಕಲಾವಿದರಿಗೆ ಸಂಗೀತ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ” ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, “ಪಕ್ಷಾತೀತವಾಗಿ ಸಂವಿಧಾನಾತ್ಮಕ ಕೆಲಸ ಮಾಡುವುದೇ ನನ್ನ ಗುರಿ. ವಿಧಾನಸಭೆಯ ಮೊದಲ ಮಹಿಳಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ” ಎಂದು ಹರ್ಷ ವ್ಯಕ್ತಪಡಿಸಿದರು.
ಈ ವೇಳೆ ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮೀಕಾಂತ್, ಖಜಾಂಚಿ ಸುಬ್ಬಣ್ಣ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

ಪ್ರಮುಖ ಸನ್ಮಾನಿತರು
ವಿದುಷಿ ಡಾ. ಹೆಚ್.ಜಿ. ಅಮೃತವರ್ಷಿಣಿರವರು, ವೇದಾಂತರತ್ನ, ವೇದಶ್ರೀ ಡಾ. ಬಿ.ಎನ್. ನಾಗರಾಜ್ ರವರು, ವೇದ ವಿದ್ವಾನ್ ಪಂ.ಡಾ. ಭೀಮಸೇನಾಚಾರ್ಯ , ಅತನೂರುರವರು,ವೇದ ವಿದ್ವಾನ್ ಆಗಮಶಾಸ್ತ್ರ ಪ್ರವೀಣ ಶ್ರೀ ಬಿ.ಎಸ್. ಅನಂತ ಕೃಷ್ಣ ಭಟ್,ವಿದ್ವಾನ್ ಡಾ. ಕೆ.ಎಸ್. ಅರುಣ್ ಕುಮಾರ್‌ಆಚಾರ್ಯರವರು
ಫಾಲಚಂದ್ರ ಶಾಸ್ತ್ರೀರವರು, ವೇದ ವಿದ್ವಾನ್ ಡಾ. ವೆಂಕಟೇಶಾಚಾರ್ ಬಿ.ಆರ್. ಅಡ್ಡಗದ್ದೆ ಕೃಷ್ಣಮೂರ್ತಿ ಭಟ್ಟರು, ಪ್ರಭಾಕರ್ ಶಾಸ್ತ್ರೀರವರು ಅರ್ಚನ ಉಡುಪರವರು ಎಂ.ಕೆ. ವಿಶಾಲಾಕ್ಷಿರವರು ಡಾ. ಶ್ರೀಕಾಂತಮ್ ನಾಗೇಂದ್ರ ಶಾಸ್ತ್ರೀರವರು ರೈಸ್ ಗ್ರೈನ್ ವೆಂಕಟೇಶ್ ರವರು ವಿದುಷಿ ಸುಮಾ ಕೃಷ್ಣಮೂರ್ತಿರವರು ವಿದ್ವಾನ್ ಎನ್. ರಾಜ್ ಕಮಲ್ ರವರು ವಿದ್ವಾನ್ ಗಾನಕಲಾ ಶ್ರೀ ಎಸ್.ಎನ್. ಸ್ವಾಮಿರವರು ವಿದೂಷಿ ಡಾ. ಲಕ್ಷ್ಮೀ ರೇಖಾ ಅರುಣ್ ಇವರಿಗೆ ಸನ್ಮಾನಿಸಲಾಗಿದೆ ಎಂದು ವಿಕಾಸ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ ಮಾಹಿತಿ ಹಂಚಿಕೊಂಡಿದೆ.
