ಲಯನ್ಸ್ ಕ್ಲಬ್ ಅಲಂಗಾರಿಗೆ, ಜಿಲ್ಲಾ ಮಟ್ಟದ ಗೌರವ

0
48

ಮೂಡುಬಿದಿರೆ :ಲಯನ್ಸ್ ಜಿಲ್ಲಾ 317D ವತಿಯಿಂದ 2025–26ನೇ ಲಯನಿಸ್ಟಿಕ್ ವರ್ಷದ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಗ್ರಾಮೀಣ ಪ್ರದೇಶದ ಕ್ಲಬ್ ಆಗಿರುವ ಲಯನ್ಸ್ ಕ್ಲಬ್ ಅಲಂಗಾರ್ ಅತ್ಯುತ್ತಮ ಸಾಧನೆ ಮಾಡಿದೆ.

5 ವರ್ಷ ಮೇಲ್ಪಟ್ಟು ಹಾಗೂ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕ್ಲಬ್‌ಗಳ ವಿಭಾಗದಲ್ಲಿ 31 ಕ್ಲಬ್‌ಗಳ ಪೈಕಿ ಲಯನ್ಸ್ ಕ್ಲಬ್ ಅಲಂಗಾರ್ 4ನೇ ಅತ್ಯುತ್ತಮ ಕ್ಲಬ್ ಪ್ರಶಸ್ತಿ ಗೌರವವನ್ನು ಪಡೆದಿದೆ.

ಇದೇ ವಿಭಾಗದಲ್ಲಿ ಕ್ಲಬ್‌ನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಚಿ (PST) ತಂಡ ಕೂಡ ಟಾಪ್ 10 PST ತಂಡಗಳ ಪೈಕಿ ಸ್ಥಾನ ಪಡೆದಿದೆ.

2012–13ನೇ ಸಾಲಿನಲ್ಲಿ ಚಾರ್ಟರ್ ಅಧ್ಯಕ್ಷರಾಗಿದ್ದ ಫಾ. ಬಾಸಿಲ್ ವಾಸ್ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಲಯನ್ಸ್ ಕ್ಲಬ್ ಅಲಂಗಾರ್, ಕಳೆದ ಹಲವು ವರ್ಷಗಳಿಂದ ಸಮಾಜಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕಳೆದ ವರ್ಷದ PST ತಂಡವಾದ ಅಮಿತ್ ಡಿಸಿಲ್ವಾ, ರಿಚರ್ಡ್ ಡಿಸೋಜ ಹಾಗೂ ರಾಕಿ ಮಸ್ಕರೇನ್ಹಾಸ್ ಅವರು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಅವಿರತವಾಗಿ ಶ್ರಮಿಸಿ, ಅನೇಕ ಮಾನವೀಯ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿದರು. ಅವರ ಈ ಸೇವಾ ಮನೋಭಾವ ಮತ್ತು ಸಮರ್ಪಣೆಗೆ ಈಗ ಜಿಲ್ಲಾ ಮಟ್ಟದಲ್ಲಿ ಸೂಕ್ತ ಮಾನ್ಯತೆ ದೊರೆತಿದೆ.

ಈ ಸಾಧನೆಗೆ ಕಾರಣರಾದ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದೆಯೂ ಇದೇ ಉತ್ಸಾಹದಿಂದ ಸಮಾಜಸೇವೆಯನ್ನು ಮುಂದುವರಿಸಿ ಇನ್ನಷ್ಟು ಯಶಸ್ಸುಗಳನ್ನು ಗಳಿಸಲಿ ಎಂದು ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here