ಲಯನ್ಸ್ ಕ್ಲಬ್ ಅಲಂಗಾರು ವತಿಯಿಂದ ಚರ್ಚ್ ಪ್ರವೇಶ ದ್ವಾರದಲ್ಲಿ ಸಿಸಿಟಿವಿ ಕ್ಯಾಮೆರಾ ಉದ್ಘಾಟನೆ

0
15

ಮೂಡುಬಿದಿರೆ : ಲಯನ್ಸ್ ಕ್ಲಬ್ ಅಲಂಗಾರು ವತಿಯಿಂದ ಪಾಲಡ್ಕ ಚರ್ಚ್ ಪ್ರವೇಶ ದ್ವಾರದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದ ಉದ್ಘಾಟನಾ ಕಾರ್ಯಕ್ರಮವು ಮೇ.30ರಂದು ನಡೆಯಿತು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವರ್ಣಬೆಟ್ಟು ಪಾಲಡ್ಕ ಇಲ್ಲಿಯ ಶಾಲೆಗೆ ಟಿವಿ ಯನ್ನು ಕೋಡಿಗೆಯಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪಾಲಡ್ಕ ಚರ್ಚ್ ಧರ್ಮ ಗುರುಗಳಾದ ವಂದನೀಯ ಪೌಲ್ ಕ್ರಾಸ್ತ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಅವಿಲ್ ಡಿಸೋಜಾ, ಕಾರ್ಯದರ್ಶಿ ರೆನಿಟಾ ಸೆರಾವೊ, ಲಯನ್ಸ್ ಕ್ಲಬ್ ಅಲಂಗಾರು ಸದಸ್ಯರು ಹಾಗೂ ಚರ್ಚ್ ಪ್ರವೇಶ ದ್ವಾರ ಸುತ್ತಮುತ್ತಲಿನ ಸಾರ್ವಜನಿಕರು ಭಾಗವಹಿಸಿದರು.

ಗುಂಡ್ಯಡ್ಕ ಏರುಗುಂಡಿ ಪಾಲ್ಸ್ ನಲ್ಲಿ ಸೂಚನಾ ಫಲಕ ಅಳವಡಿಕೆ

ಕಾರ್ಯಕ್ರಮವು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಅಮಿತ್ ಡಿಸಿಲ್ವಾ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ನಂತರ ಕ್ಲಬ್ ಕಾರ್ಯದರ್ಶಿ ಲಯನ್ ರಿಚರ್ಡ್ ಡಿಸೋಜಾ ಅವರು ಲಯನ್ಸ್ ಇಂಟರ್‌ನ್ಯಾಷನಲ್ ಹಾಗೂ ಲಯನ್ಸ್ ಕ್ಲಬ್ ಅಲಂಗಾರು ಇದರ ಸಂಕ್ಷಿಪ್ತ ಇತಿಹಾಸವನ್ನು ಪರಿಚಯಿಸಿದರು.

ವಂದನೀಯ ಪೌಲ್ ಕ್ರಾಸ್ತ ಅವರು ಸಿಸಿಟಿವಿ ಕ್ಯಾಮೆರಾವನ್ನು ಉದ್ಘಾಟಿಸಿ ಮಾತನಾಡಿ, ಲಯನ್ಸ್ ಕ್ಲಬ್ ಅಲಂಗಾರು ಕೈಗೊಂಡಿರುವ ಸಮಾಜಮುಖಿ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಧರ್ಮ, ಜಾತಿ, ಮತ ಭೇದವಿಲ್ಲದೆ ಸಾರ್ವಜನಿಕ ಹಿತದೃಷ್ಟಿಯಿಂದ ಪಾಲಡ್ಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ಇಂತಹ ಸೇವಾ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾರವಿರುವುದಾಗಿ ಭರವಸೆ ನೀಡಿದರು.

ಪಾಲಡ್ಕ ಚರ್ಚ್ ಹಾಗೂ ಗುಂಡ್ಯಡ್ಕ ಜೋಡು ರಸ್ತೆ ತಿರುವಿನಲ್ಲಿ ಕನ್ನಡಿ ಅಳವಡಿಕೆ

ಲಯನ್ ಆಲ್ವಿನ್ ಡಿಕುನ್ಹಾರವರು ವಂದನಾರ್ಪಣೆಯನ್ನು ನೆರವೇರಿಸಿದ ಈ ಕಾರ್ಯಕ್ರಮವನ್ನು ಲಯನ್ ಮೆಲಿಟಾ ಬಾರ್ಬೋಜಾ ನಿರೂಪಿಸಿದರು. ಕೊನೆಯಲ್ಲಿ ಉಪಸ್ಥಿತರಿದ್ದವರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here