ಮೂಲ್ಕಿ : ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫೈರ್ ನ ಮಾಸಿಕ ಸಭೆಯು ಬಪ್ಪನಾಡಿನ ಮಾತಾ ಪಂಚ ದುರ್ಗ ರೆಸಿಡೆನ್ಸಿಯ ಧನ್ವಂತರಿ ಭವನದಲ್ಲಿ ಜರಗಿತು. ಈ ಸಂದರ್ಭ 2026- 27ನೇ ಸಾಲಿಗೆ ಪದಾಧಿಕಾರಿಗಳ ನೇಮಕ ಕಾರ್ಯಕ್ರಮ ಜರಗಿ ಅಧ್ಯಕ್ಷರಾಗಿ ಮುಲ್ಕಿ ಶಾಂಭವಿ ಜೆಸಿಸ್ ನ ಯಶಸ್ವಿ ಮಾಜಿ ಅಧ್ಯಕ್ಷರಾದ ಲಯನ್ ಕಲ್ಲಪ್ಪ ತಡವಲಗ ಕಾರ್ಯದರ್ಶಿಯಾಗಿ ದ್ವಿತೀಯ ವರ್ಷದ ಅತ್ಯುತ್ತಮ ಕಾರ್ಯದರ್ಶಿ ಲಯನ್ ಪುಷ್ಪರಾಜ ಚೌಟ ಕೋಶಾಧಿಕಾರಿಯಾಗಿ ಲಯನ್ ಪ್ರಶಾಂತ ಶರ್ಮ ಆಯ್ಕೆಯಾದರು.
ಸಭೆಯಲ್ಲಿ ಅಧ್ಯಕ್ಷರಾದ ಅನಿಲ್ ಕುಮಾರ್ ಕಾರ್ಯದರ್ಶಿ, ಅಶ್ವಿನಿ ಶರ್ಮ ಕೋಶಾಧಿಕಾರಿ ಸಂತೋಷ್ ಕುಮಾರ್ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್ ಪ್ರತಿಭಾ ಹೆಬ್ಬಾರ್ ಸುದೀರ್ ಬಾಳಿಗ ಭಾಸ್ಕರ್ ಕಾಂಚನ್ ಬಿ ಶಿವಪ್ರಸಾದ್ ಪ್ರಣವ್ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು.

