ತೀರ್ಥಹಳ್ಳಿ: ಶ್ರೀ ಗುತ್ಯಮ್ಮ ಮಾತಂಗ್ಯಮ್ಮನವರ ದೇವಸ್ಥಾನ ಶ್ರೀ ಸತ್ಯ ಕ್ಷೇತ್ರ ತಲ್ಲೂರಂಗಡಿ ದೇವರ ನೂತನ ಶಿಲಾ ದೇಗುಲ ಲೋಕಾರ್ಪಣೆ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮೇ.22 ಮತ್ತು 23ರಂದು ನಡೆಯಲಿದೆ.
20-5-2025 ರಂದು 5.00 ಗಂಟೆಗೆ 8 ಗ್ರಾಮಗಳಿಂದ ಸಂಗ್ರಹವಾದ ಹೊರೆಕಾಣಿಕೆಗಳನ್ನು ವಾಹನಗಳೊಂದಿಗೆ ತಲ್ಲೂರಂಗಡಿ ಕೈಮರದಿಂದ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ಸಾಗಿ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ.
22-05-2025ನೇ ಗುರುವಾರ ಬೆಳಿಗ್ಗೆ 8-00 ಗಂಟೆಗೆ ಪ್ರಾರ್ಥನೆ, ಪಲನ್ಯಾಸ, ಗುರುಗಣಪತಿ ಪೂಜಾ, ಪುಣ್ಯ, ದೇವಾನಾಂದಿ, ಋತ್ವಿಘರಣ ಗಣಪತಿ ಹೋಮ, ನವಗ್ರಹ ಹೋಮ ಅದಿವಾಸ ಪೂಜಾಧಿಗಳು.
ಸಂಜೆ 6 ಗಂಟೆಯಿಂದ ರಾಕ್ಷೋಗ್ನ, ವಾಸ್ತುಪೂಜಾ ಹೋಮಾಧಿಗಳು, ಸ್ತ್ರಪತಿ ಪೂಜಾ, ಪ್ರಸಾದ ಶುದ್ದಿ, ಸ್ಥಾನ ಶುದ್ದಿ, ಪ್ರತಿಷ್ಠಾಂಗ ಹೋಮ ಶಾಯಾಧಿವಾಸ ಪೂಜೆಗಳು” ನಡೆಯಲಿದೆ.

23-5-2025ನೇ ಶುಕ್ರವಾರ ಬೆಳಿಗ್ಗೆ 6-00 ಗಂಟೆಗೆ ಗುರು ಗಣಪತಿ ಪೂಜಾ ಪುಣ್ಯ: ಬೆಳಿಗ್ಗೆ 8 ರಿಂದ 9.30ಕ್ಕೆ ಬಿಂಬ ಪ್ರತಿಷ್ಠಾ, ಪ್ರಾಣ ಪ್ರತಿಷ್ಠೆ, ಜೀವ ಕುಂಭಾಭಿಷೇಕ, ಕಲಾತತ್ವಾದಿವಾಸ ಹೋಮ, 11-00 ಗಂಟೆಗೆ ಶಿಖರ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ಮಂತ್ರಾಕ್ಷತೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ನಂಬಿದವರ ಇಂಬು ಕಾಯುವಳು ಅಮ್ಮ
ತಲ್ಲೂರಂಗಡಿ ಶ್ರೀ ಕ್ಷೇತ್ರದ ಶಕ್ತಿ ದೇವತೆ ಗುತ್ಯಮ್ಮ ಮಾತಾಂಗಿಯಮ್ಮ ಗ್ರಾಮ ದೇವತೆ ಮಾತ್ರವಲ್ಲ, ಸುತ್ತಮುತ್ತ ಎಂಟು ಗ್ರಾಮಗಳ ಅಧಿದೇವತೆ, ಸುತ್ತಾ ಹತ್ತಾರು ಹಳ್ಳಿಯ ಮಲೆನಾಡು ಮುಗ್ಧ ರೈತಾಪಿ ಜನರ ಕಾಪಾಡುವ ಆದಿ ಶಕ್ತಿಯು ಹೌದು ಇಲ್ಲೀನ ವಿಶೇಷವೆಂದರೆ ಬ್ರಾಹ್ಮಣರ ಪೂಜೆ ಅಲ್ಲ. ಬದಲಾಗಿ ಜೋಗಿ ವಂಶಸ್ಥರು, ಶ್ರೀ ದೇವಿಗೆ ಪೂಜೆ ಸಲ್ಲಿಸುವುದು ವಿಶೇಷ. ದೇವಿಯು ಯಾವ ಬಂಧಗಳು ಇಲ್ಲದೆ ಭಕ್ತರಿಗೆ ನೇರವಾಗಿ ದೊರೆಯುವ ಮಹಾಮಾತೆಯಾಗಿದ್ದಾಳೆ. ಕೃಷಿ, ಮಳೆ, ಬೆಳೆ, ಮನೆಯವರ ಆರೋಗ್ಯ, ಮದುವೆ, ಸಂಬಂಧ, ಕಷ್ಟ ನಷ್ಟ, ಹೀಗೆ ಎಲ್ಲದಕ್ಕೂ ತಾಯಿಯನ್ನೂ ಆಶ್ರಯಿಸುವುದು ಇವಳನ್ನು ನಂಬಿ ಬಂದ ಭಕ್ತರು ನಿತ್ಯ ಆರಾಧನೆ ಹತ್ತು ಹಲವು ಹರಕೆ ಹೇಳಿಕೊಳ್ಳುತ್ತಾರೆ. ತಾಯಿ ಕೂಡ ಅವುಗಳನ್ನು ನೆರವೇರಿಸುತ್ತಾ ತನ್ನ ಮಕ್ಕಳನ್ನು ಪರಿಪರಿಯಾಗಿ ಸಲಹಿ ಪೂರೈಸಿ ಹರಸುತ್ತಾಳೆ.
ತಲ್ಲೂರಂಗಡಿಯ ಮಹಾ ಮಹಿಮೆಯ ಪುಣ್ಯ ಕ್ಷೇತ್ರವಿದು
ಬಾಳೇಹಳ್ಳಿ ಗ್ರಾಮದ ಆನಂದೂರು ಮನೆತನಕ್ಕೆ ಸೇರಿದ ಹಸುವೊಂದು ಸಂಜೇಯಾದರೂ ಮನೆಗೆ ಮರಳುವುದಿಲ್ಲ. ಆ ಮನೆತನದ ಒಬ್ಬರು ಊರೆಲ್ಲ ಹುಡುಕಿದರೂ ಆ ಗೋಮಾತೆ ಕಾಣುವುದಿಲ್ಲ. ಕೊನೆಗೆ ಒಂದು ನಿರ್ಜನ ಪ್ರದೇಶದ ಕಾಡು ಮಧ್ಯೆ ಇದ್ದಂತಹ ಕಲ್ಲೋಂದರ ಮೇಲೆ ಹಸು ಕ್ಷೀರಧಾರೆ ಸುರಿಸುತ್ತಿತ್ತು. ಆ ಮನೆತನದವರು ದಿಗ್ಧಂತರಾದರು ಹಾಗೆ ಗೋಮಾತೆಯ ಕ್ಷೀರದಾರೆ ಕರೆಯುತ್ತಾ ನಿಂತ ಈ ಕಲ್ಲು ಸಾಮಾನ್ಯವಾದ್ದಲ್ಲ ಎಂದು ನಮ್ಮ ಹಿರಿಯರು ಸೇವೆಯಲ್ಲಿ ತೊಡಗಿದ್ದರು. ಆ ಕಲ್ಲೇ ನೀರಿನ ಇಂದಿನ ಗುತ್ಯಮ್ಮ, ಮಾತಂಗಿಯಮ್ಮ ಎಂಬುದು ಈ ಕ್ಷೇತ್ರದ ಮಹಿಮೆ. ಹಿಂದಿನ ಹಲವಾರು ಹಿರಿಯರು ಸಮಿತಿಗಳನ್ನು ರಚಿಸಿ ಬರುವ ಭಕ್ತಾಧಿಗಳಿಗೆ ಮದುವೆ ಹಾಗೂ ವಿಶೇಷ ಸಮಾರಂಭಗಳಿಗೆ ಬೇಕಾದ ಸುಸಜ್ಜಿತ ಸಮುದಾಯ ಭವನ ವಿಶೇಷ ಸಂದರ್ಭಗಳಲ್ಲಿ ಅನ್ನಧಾನ ಸೇವೆ ನಡೆಸುತ್ತಾ ಬಂದಿದ್ದರು. ದಿನ ನಿತ್ಯ ನಡೆಯುವ ಪೂಜೆಗಳಿಗೆ ಸಾವಿರಾರು ಭಕ್ತರು ‘ನಿತ್ಯ ಪೂಜೆ’ ಸೇವೆಯನ್ನು ಕೊಟ್ಟಿದ್ದು ಅವರುಗಳ ಹೆಸರಿನಲ್ಲಿ ಪೂಜೆ ನಡೆಯುತ್ತಿದೆ. ಮದುವೆ ಇನ್ನಿತರೆ ಸಮಾರಂಭಗಳು ದೇವಸ್ಥಾನದ ಪಕ್ಕದ ಸಮುದಾಯ ಭವನದಲ್ಲಿ ನೆರವೇರಿಸಲು ವ್ಯವಸ್ಥಾಪನಾ ಸಮಿತಿ ಕಾರ್ಯನಿರತವಾಗಿದೆ.