ಬಜರಂಗದಳದ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಹತ್ಯೆ ಖಂಡನೀಯ : ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿ – ಹಿಂದೂ ಜನಜಾಗೃತಿ ಸಮಿತಿ

0
249

ಮಂಗಳೂರಿನ ಬಜರಂಗದಳದ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಇಸ್ಲಾಮಿಕ್ ಜಿಹಾದಿಗಳು ಸಾರ್ವಜನಿಕವಾಗಿ ಬರ್ಬರವಾಗಿ ಹತ್ಯೆ ಮಾಡಿರುವ ಹೇಯ ಕೃತ್ಯವನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಪ್ರವೀಣ್ ನೆಟ್ಟಾರುರವರ ಹತ್ಯೆಯ ನಂತರ ಪುನಃ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿರುವುದು ಕಾಂಗ್ರೆಸ್ ಕಾಲಾವಧಿಯಲ್ಲಿ ಮುಸಲ್ಮಾನರ ಓಲೈಕೆಯ ರಾಜಕಾರಣದಿಂದಾಗಿ ಹಿಂದುಗಳು ಅಸುರಕ್ಷಿತರಾಗಿರುವುದು ಗಮನಕ್ಕೆ ಬರುತ್ತಿದೆ. ಕಾಂಗ್ರೆಸ್ ಸರ್ಕಾರವು ಈ ಹಿಂದೆ ದಂಗೆ, ಬರ್ಬರ ಹತ್ಯೆಯಂತಹ ಪ್ರಮುಖವಾದ ಗಂಭೀರ ಅಪರಾಧದ ಪ್ರಕರಣಗಳಲ್ಲಿ ಭಾಗಿಯಾದಂತಹ ಇಸ್ಲಾಮಿಕ್ ಜಿಹಾದಿಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿರುವುದು, ಇಂದು ರಾಜ್ಯದಲ್ಲಿ ಜಿಹಾದಿಗಳಿಗೆ ಇಂತಹ ಕುಕೃತ್ಯವನ್ನು ಮುಂದುವರಿಸಲು ನೀಡಿದ ಕುಮುಕ್ಕಾಗಿದೆ. ಸುಹಾಸ್ ಶೆಟ್ಟಿ ಅವರಿಗೆ ಜಿಹಾದಿಗಳು ಏಪ್ರಿಲ್ 30 ರಂದು ಜೀವ ಬೆದರಿಕೆಯನ್ನು ಹಾಕಿ ನಿಮ್ಮನ್ನು ಹತ್ಯೆ ಮಾಡುತ್ತೇವೆ ಎಂದು ಹೇಳಿದ ನಂತರ ಅವರ ಹತ್ಯೆಯನ್ನು ಇಸ್ಲಾಮಿಕ್ ಜಿಹಾದ್ ಗಳು ಮಾಡಿರುವುದು ಇದೊಂದು ಪೂರ್ವಯೋಜಿತ ಷಡ್ಯಂತ್ರವೆಂಬುದು ಗಮನಕ್ಕೆ ಗಮನಕ್ಕೆ ಬರುತ್ತಿದೆ. ಇಸ್ಲಾಮಿಕ್ ಜಿಹಾದ್ ಗಳು ರಾಜ್ಯ ಸರ್ಕಾರದಲ್ಲಿ ರಾಜಾರೋಷವಾಗಿ ಹಿಂದು ನಾಯಕರನ್ನು ಬರ್ಬರವಾಗಿ ಹತ್ಯೆ ಮಾಡುತ್ತಿರುವುದು ಮತಾಂಧರಿಗೆ ಕಾನೂನಿನ ಭಯ ಇಲ್ಲದಿರುವುದು ಗಮನಕ್ಕೆ ಬರುತ್ತದೆ. ಈ ಎಲ್ಲ ಘಟನೆಗಳು ಅತ್ಯಂತ ಗಂಭೀರವಾಗಿದ್ದು. ಈ ಪ್ರಕರಣದ ತನಿಕೆಯನ್ನು ರಾಷ್ಟ್ರೀಯ ತನಿಖಾ ದಳದಿಂದ ಮಾಡಿಸಬೇಕು ಈ ಪ್ರಕರಣದಲ್ಲಿ ಭಾಗಿಯಾದ ಅಪರಾಧಿಗಳಿಗೆ, ಮತ್ತು ಅವರಿಗೆ ಸಹಾಯ ಮಾಡಿದವರಿಗೆ, ಕುಮ್ಮಕ್ಕು ನೀಡಿದವರ ಬಂಧನ ಮಾಡಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸುತ್ತದೆ.

LEAVE A REPLY

Please enter your comment!
Please enter your name here