ಮೂಡುಬಿದಿರೆ: ಕಾರ್ಕಳ ಕಡೆಯಿಂದ ಮೂಡುಬಿದಿರೆ ಕಡೆಗೆ ಮರ ತುಂಬಿಸಿಕೊಂಡು ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬನ್ನಡ್ಕ ದ್ವಾರದ ಬಳಿಯ ಹೆದ್ದಾರಿಯಲ್ಲಿ ಭಾನುವಾರ ಪಲ್ಟಿಯಾಗಿದೆ.

ಲಾರಿ ಪಲ್ಟಿಯಾದ ರಭಸಕ್ಕೆ ಅದರಲ್ಲಿದ್ದ ಮರದ ತುಂಡುಗಳು ರಸ್ತೆಗೆ ಎಸೆಯಲ್ಪಟ್ಟಿವೆ. ಅಪಘಾತದ ತೀವ್ರತೆಗೆ ಲಾರಿ ಜಖಂಗೊಂಡಿದ್ದರೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ

