ಗೋಕಳ್ಳತನ ವಿರುದ್ಧ ಹಿಂ. ಜಾ. ವೇ ಬೈಂದೂರು ತಾಲೂಕು ವತಿಯಿಂದ ಆಗ್ರಹ

0
19

ಗೋಕಳ್ಳರನ್ನ ಬಂದಿಸುವಂತೆ ಕೊಲ್ಲೂರು ಪೊಲೀಸರಿಗೆ 3 ದಿನದ ಗಡವು ನೀಡಿದ ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ಸಂಯೋಜಕ ಹರೀಶ್ ಸಲ್ಕೋಡ್

ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋವುಗಳ ಕಳ್ಳತನ ಹಾಗೂ ಅಕ್ರಮ ಗೋಸಾಗಾಟವನ್ನು ತಡೆಗಟ್ಟಲು ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಬೈಂದೂರು ಆಗ್ರಹ

ಗೋಕಳ್ಳರನ್ನು ಬಂದಿಸುವಲ್ಲಿ ಪೊಲೀಸ್ ನಿರ್ಲಕ್ಷಿಸಿದರೆ ಹಿಂದೂ ಜಾಗರಣ ವೇದಿಕೆ ಉಗ್ರ ಪ್ರತಿಭಟನೆ

ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋವುಗಳ ಕಳ್ಳತನ ಹಾಗೂ ಅಕ್ರಮ ಗೋಸಾಗಾಟವನ್ನು ತಡೆಗಟ್ಟಲು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಲಾಯಿತು.

ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾರಣಕಟ್ಟೆ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಗೋವುಗಳ ಕಳ್ಳತನ ಹಾಗೂ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಕೆಲವು ಸಂದರ್ಭಗಳಲ್ಲಿ ಮಾರಕಾಯುಧಗಳನ್ನು ಹಿಡಿದು ಗೋವುಗಳನ್ನು ಹತ್ಯೆ ಮಾಡಿ ಸಾಗಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳೂ ಕೇಳಿಬರುತ್ತಿವೆ.
ಇದಕ್ಕೆ ಸಂಬಂಧಿಸಿದಂತೆ ತಮ್ಮ ಠಾಣೆಯಲ್ಲಿ ಕ್ರೈಮ್ ನಂಬರ್ 57/2026 ಅಡಿಯಲ್ಲಿ ಸ್ಥಳೀಯ ನಿವಾಸಿ ದೂರು ದಾಖಲಿಸಿದ್ದಾರೆ.
ಸನಾತನ ಹಿಂದೂ ಧರ್ಮದ ಪುಣ್ಯ ಕ್ಷೇತ್ರದ ಮುಂದೆ ಮಲಗಿರುವ ಗೋವುಗಳನ್ನು ಹಿಂಸಾತ್ಮಕವಾಗಿ ಐಷಾರಾಮಿ ಕಾರಿನಲ್ಲಿ ತುಂಬಿಕೊಂಡು ಹೋಗುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ನಮ್ಮ ಧಾರ್ಮಿಕ ಕ್ಷೇತ್ರದ ಸಮೀಪದಲ್ಲೇ ಗೋವನ್ನು ಹಿಂಸಾತ್ಮಕವಾಗಿ ಯಾವುದೇ ಕಾನೂನಿನ ಭಯವಿಲ್ಲದೆ ಪುಣ್ಯ ಕ್ಷೇತ್ರವನ್ನು ಅಪವಿತ್ರ ಮಾಡಲು ಹೋರಟಿರುವುದು ಖಂಡನೀಯ.

ಗೋವುಗಳು ನಮ್ಮ ಸಮಾಜದ ಪ್ರಮುಖ ಭಾಗವಾಗಿದ್ದು, ಅನೇಕ ರೈತ ಕುಟುಂಬಗಳ ಜೀವನೋಪಾಯದೊಂದಿಗೆ ನೇರವಾಗಿ ಸಂಬಂಧ ಹೊಂದಿವೆ.
ಇಂತಹ ಗೋವುಗಳನ್ನು ರಾತ್ರೋರಾತ್ರಿ ಕೊಟ್ಟಿಗೆಯಿಂದ ಕಳ್ಳತನ ಮಾಡುತ್ತಿರುವುದು ರೈತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಉಂಟುಮಾಡಿದೆ.

  ರಾಜ್ಯದಲ್ಲಿ ಜಾನುವಾರುಗಳ ಹತ್ಯೆ ಮತ್ತು ಅಕ್ರಮ ಸಾಗಾಟಕ್ಕೆ ಸಂಬಂಧಿಸಿದ ಕಾನೂನುಗಳು ಜಾರಿಯಲ್ಲಿದ್ದರೂ, ಕಾನೂನಿನ ಭಯವಿಲ್ಲದೆ ಇಂತಹ ಕೃತ್ಯಗಳು ನಡೆಯುತ್ತಿರುವುದು ಅತ್ಯಂತ ಗಂಭೀರ ವಿಷಯವಾಗಿದೆ. ಈ ಕಳ್ಳತನಗಳ ಹಿಂದೆ ಸಂಘಟಿತ ಜಾಲವಿದೆಯೇ ಎಂಬುದನ್ನೂ ಪೊಲೀಸ್ ಇಲಾಖೆ ಸಮಗ್ರವಾಗಿ ತನಿಖೆ ನಡೆಸಬೇಕಾಗಿದೆ.

ಹಿಂ. ಜಾ. ವೇ ಬೈಂದೂರು ಮುಖ್ಯ ಆಗ್ರಹಗಳು

  • ಕಠಿಣ ಕಾನೂನು ಕ್ರಮ: ಗೋವುಗಳನ್ನು ಕಳ್ಳತನ ಮಾಡುವ ಹಾಗೂ ಅಕ್ರಮವಾಗಿ ಸಾಗಾಟ ಮಾಡುವವರ ವಿರುದ್ಧ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಕಠಿಣ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು.
  • ತಕ್ಷಣದ ತನಿಖೆ ಮತ್ತು ಬಂಧನ: ಇತ್ತೀಚೆಗೆ ಕಳ್ಳತನವಾಗಿರುವ ಗೋವುಗಳನ್ನು ಪತ್ತೆಹಚ್ಚಿ, ಕಳ್ಳತನ ಮತ್ತು ಅಕ್ರಮ ಸಾಗಾಟದಲ್ಲಿ ಭಾಗಿಯಾಗಿರುವವರನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಬೇಕು.
  • ಅಕ್ರಮ ಸಾಗಾಟಕ್ಕೆ ಕಡಿವಾಣ: ಗೋವುಗಳನ್ನು ಸಾಗಿಸುವ ಅನುಮಾನಾಸ್ಪದ ಐಷಾರಾಮಿ ವಾಹನಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
  • ಪೊಲೀಸ್ ಗಸ್ತು ಮತ್ತು ಕಟ್ಟೆಚ್ಚರ: ಮಾರಣಕಟ್ಟೆ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸಬೇಕು.
  • ಹಿಂದಿನ ಪ್ರಕರಣಗಳ ತನಿಖೆ: ಈ ಹಿಂದೆ ಗುಂಡಾ ನಡೆದಿರುವ ಗೋವು ಕಳ್ಳತನದ ಪ್ರಕರಣಗಳನ್ನೂ ಮರುಪರಿಶೀಲಿಸಿ, ಬಾಕಿ ಇರುವ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಬೇಕು.

ನಮ್ಮ ಭಾಗದ ರೈತರ ಆಸ್ತಿಯಾಗಿರುವ ಗೋವುಗಳ ರಕ್ಷಣೆ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಗೋವು ಕಳ್ಳತನ ಮತ್ತು ಅಕ್ರಮ ಗೋಸಾಗಾಟಕ್ಕೆ ಸಂಪೂರ್ಣ ಕಡಿವಾಣ ಹಾಕಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಹಿಂದು ಜಾಗರಣ ವೇದಿಕೆ, ಬೈಂದೂರು ತಾಲೂಕು ವತಿಯಿಂದ ಈ ಮೂಲಕ ಆಗ್ರಹಿಸಲಾಯಿತು..

ಈ ಕುರಿತು ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದರೆ ಅಥವಾ ಇಂತಹ ಘಟನೆಗಳು ಮುಂದುವರಿದರೆ, ಹಿಂದು ಜಾಗರಣ ವೇದಿಕೆ ವತಿಯಿಂದ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಾಗೂ ಉಗ್ರ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಹಿಂದೂ ಜಾಗರಣ ವೇದಿಕೆ ಎಚ್ಚರಿಸಿದೆ.

ಈ ಸಂಧರ್ಭದಲ್ಲಿ ನಾಗರಾಜ್ ಗೋಳಿಹೋಳೆ ವಕೀಲರು , ಶಂಕರ ಕೋಟ, ಸುಭೋದ್ ಜಡ್ಕಲ್ ದಿನಕರ ಅದೇಲು, ವಿರಣ್ಣ ಶೆಟ್ಟಿ ಜಡ್ಕಲ್, ಶ್ರೀನಿವಾಸ್ ಮಂಜ ಮರಣಕಟ್ಟೆ ಪ್ರವೀಣ ಜಡ್ಕಲ್ ಗೋಪಾಲ ಜಡ್ಕಲ್, ನವೀನ್ ಗಂಗೋಳ್ಳಿ, ಕಾರ್ತಿಕ್ ಗಂಗೋಳ್ಳಿ, ಹರೀಶ ಸಳ್ಕೋಡು ಉಪಸ್ಥಿತರಿದ್ದರು.