ವಯಸ್ಸಿಗೆ ಮೀರಿ ಪ್ರೇಮ : ನಲವತ್ತರ ಮಹಿಳೆಯೊಂದಿಗೆ ಇಪ್ಪತ್ತರ ಯುವಕ ಪ್ರೀತಿ – ಮನೆ ಬಿಟ್ಟು ಪರಾರಿ..!

0
18

ಅಮ್ರೋಹಾ : ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಇಂತಹದ್ದೇ ಒಂದು ವಿಚಿತ್ರ ಪ್ರೇಮ ಪ್ರಕರಣ ಬೆಳಕಿಗೆ ಬಂದಿದ್ದು, 21 ವರ್ಷದ ಯುವಕನೊಬ್ಬ ತನಗಿಂತ 19 ವರ್ಷ ದೊಡ್ಡವಳಾದ ಮಹಿಳೆಯನ್ನು ಪ್ರೀತಿಸಿ ಮದುವೆಯಾಗುವ ಮೂಲಕ ಎರಡೂ ಕುಟುಂಬಗಳಿಗೆ ಆಘಾತ ನೀಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಶುರುವಾದ ಇವರ ಪರಿಚಯವು ಮನೆಯವರು ಒಪ್ಪದಿದ್ದರೂ ದೇವಸ್ಥಾನದಲ್ಲಿ ರಹಸ್ಯ ವಿವಾಹವಾಗುವ ಮಟ್ಟಕ್ಕೆ ತಲುಪಿದೆ.

ಅಮ್ರೋಹಾದ ಈ ಯುವಕ ಆಗ್ರಾದ 40 ವರ್ಷದ ವಿಧವೆ ಮಹಿಳೆಯ ಪ್ರೇಮಪಾಶಕ್ಕೆ ಬಿದ್ದಿದ್ದಾನೆ. ಮಗ ಹಠಾತ್ತನೆ ನಾಪತ್ತೆಯಾದಾಗ ಆತಂಕಗೊಂಡ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಯುವಕ ಆಗ್ರಾದಲ್ಲಿ ಆ ಮಹಿಳೆಯ ಜೊತೆ ಇರುವುದು ಪತ್ತೆಯಾಗಿದೆ. ಮಗನನ್ನು ಹುಡುಕಿಕೊಂಡು ಆಕೆಯ ಮನೆಗೆ ತಾಯಿ ಹೋದಾಗ ಅಲ್ಲಿ ದೊಡ್ಡ ಗದ್ದಲವೇ ನಡೆದಿದೆ. ಮನೆಯವರಿಗೆ ತಿಳಿಸದೆ ಇವರಿಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದು, ಈಗ ಜೊತೆಯಾಗಿ ಬದುಕುತ್ತಿರುವುದು ಬೆಳಕಿಗೆ ಬಂದಿದೆ.

ಈ ಘಟನೆಯು ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಮಗನ ಈ ನಡೆಯಿಂದ ಕುಟುಂಬದವರು ಸಮಾಜದಲ್ಲಿ ತಲೆ ತಗ್ಗಿಸುವಂತಾಗಿದೆ. ಆನ್‌ಲೈನ್ ಲೋಕದ ಮಾತುಕತೆ ಮತ್ತು ನೈಜ ಜೀವನದ ನಡುವಿನ ವ್ಯತ್ಯಾಸ ತಿಳಿಯದ ಯುವಕರು ಇಂತಹ ಸಾಹಸಕ್ಕೆ ಕೈಹಾಕುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಯುವಕನ ಪಾಲಿಗೆ ಇದು ಪ್ರೀತಿಯಾಗಿದ್ದರೂ, ಹೆತ್ತವರಿಗೆ ಮಾತ್ರ ಈ ಸಂಬಂಧ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

LEAVE A REPLY

Please enter your comment!
Please enter your name here