ಎಲ್‌ಪಿಜಿ ಅಡುಗೆ ಅನಿಲ ಬಳಕೆದಾರರು ಇನ್ನು ಮುಂದೆಇ-ಕೆವೈಸಿ (ಇಲೆಕ್ಟ್ರಾನಿಕ್ ನೋ ಯೂರ್ ಕಸ್ಟಮರ್) ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕಾಗಿದೆ.ಇ-ಕೆವೈಸಿ ಮಾಡದೇ ಇದ್ದರೆ ಅಡುಗೆ ಅನಿಲ ಸಿಲಿಂಡರ್ ಪಡೆಯುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದ್ದು, ಸರ್ಕಾರದಿಂದ ಲಭ್ಯವಾಗುವ ಗ್ಯಾಸ್ ಸಬ್ಸಿಡಿಯೂ ಸ್ಥಗಿತಗೊಳ್ಳಲಿದೆ ಎಂದು ತಿಳಿಸಲಾಗಿದೆ.
ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನೀಡುತ್ತಿರುವ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಾಗೂ ತೆಲಂಗಾಣ ಸರ್ಕಾರದ 500 ರೂ. ಸಬ್ಸಿಡಿ ಕೂಡ ಇ-ಕೆವೈಸಿ ಪೂರ್ಣಗೊಳಿಸದ ಗ್ರಾಹಕರಿಗೆ ಮುಂದುವರಿಯುವುದಿಲ್ಲ. ಇದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಮಾನ್ಯ ಗ್ರಾಹಕರಿಗೂ eKYC ಅನ್ನು ಕಡ್ಡಾಯಗೊಳಿಸುವ ನಿರ್ಧಾರ ಕೈಗೊಂಡಿವೆ.
ಈ ಪ್ರಕ್ರಿಯೆ ಸಾಕಷ್ಟು ಸಮಯದಿಂದ ಜಾರಿಯಲ್ಲಿದ್ದರೂ, ಸಾರ್ವಜನಿಕರ ಅನುಕೂಲಕ್ಕಾಗಿ ಗಡುವನ್ನು ಜನವರಿ 31ರವರೆಗೆ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ಎಲ್‌ಪಿಜಿ ಸಿಲಿಂಡರ್ ಬಳಕೆದಾರರು ನಿಗದಿತ ಅವಧಿಯೊಳಗೆ ಇ-ಕೆವೈ ಸಿಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಇ-ಕೆವೈಸಿ ಹೇಗೆ ಮಾಡಬಹುದು?
ಗ್ಯಾಸ್ ವಿತರಣೆಗೆ ಬರುವ ವಿತರಣಾ ಸಿಬ್ಬಂದಿಯ ಬಳಿ ಇರುವ ಬಯೋಮೆಟ್ರಿಕ್ ಯಂತ್ರದ ಮೂಲಕ, ನಿಮ್ಮ ಗ್ಯಾಸ್ ಏಜೆನ್ಸಿ ಕಚೇರಿಗೆ ನೇರವಾಗಿ ತೆರಳಿ ಸಂಬಂಧಿಸಿದ ಗ್ಯಾಸ್ ಕಂಪನಿಗಳ ಮೊಬೈಲ್ ಅಪ್ಲಿಕೇಶನ್ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ eKYC ಕುರಿತು ಹೆಚ್ಚಿನ ಮಾಹಿತಿಗಾಗಿ www.pmuy.gov.in/e-kyc.html ವೆಬ್‌ಸೈಟ್‌ನ್ನು ಅಥವಾ ತೈಲ ಉದ್ಯಮದ ಟೋಲ್ ಫ್ರೀ ಸಂಖ್ಯೆ 1800 233 3555 ಅನ್ನು ಸಂಪರ್ಕಿಸಬಹುದು.
ಈ ಹಿಂದೆ ನಿಗದಿಯಾಗಿದ್ದ ಗಡುವು ಮುಗಿದಿರುವುದರಿಂದ ಇದೀಗ ಜನವರಿ 31ರವರೆಗೆ ವಿಸ್ತರಿಸಲಾಗಿದೆ. ಇನ್ನೂ eKYC ಮಾಡದ ಗ್ರಾಹಕರು ತಕ್ಷಣವೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದ್ದು, ಇಲ್ಲದಿದ್ದರೆ ಸಬ್ಸಿಡಿ ನಿಲ್ಲುವ ಮೂಲಕ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ.

