ಕೃತಕ ಕಾಲು ಜೋಡಣಾ ಶಿಬಿರದಲ್ಲಿ ಮಡಿಲು ಸೇವಾ ತಂಡದಿಂದ ಇಬ್ಬರು ಫಲಾನುಭವಿಗಳಿಗೆ ನೆರವು

0
19

ಮಡಿಲು ಸೇವಾ ತಂಡದ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ; ಗಾಲಿಕುರ್ಚಿ ಹಾಗೂ ವಾಕಿಂಗ್ ಸ್ಟಿಕ್ ಕೊಡುಗೆ

ಮಂಗಳೂರು : ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಗಳೂರಿನ ಲಾಯಲಾ ಹಾಲ್‌ನಲ್ಲಿ ಅಕ್ಟೋಬರ್ 13ರಂದು ಆಯೋಜಿಸಲಾದ ಕೃತಕ ಕಾಲು ಜೋಡಣಾ ಶಿಬಿರದಲ್ಲಿ ಮಡಿಲು ಸೇವಾ ತಂಡದ ಅಧ್ಯಕ್ಷ ಗಜೇಂದ್ರಣ್ಣ ಹಾಗೂ ಕಾರ್ಯದರ್ಶಿ ಬಾಲಣ್ಣ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಡಿಲು ಸೇವಾ ತಂಡದ ವತಿಯಿಂದ ಇಬ್ಬರು ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ಒದಗಿಸಿ, ಅವರ ಬದುಕಿಗೆ ಹೊಸ ಭರವಸೆ ಮೂಡಿಸುವ ಸೇವಾ ಕಾರ್ಯ ಕೈಗೊಳ್ಳಲಾಯಿತು.

ಮಡಿಲು ಸೇವಾ ತಂಡದ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿದ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್, ತಂಡದ ಸೇವಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಒಂದು ಗಾಲಿಕುರ್ಚಿ ಹಾಗೂ ವಾಕಿಂಗ್ ಸ್ಟಿಕ್‌ನ್ನು ಕೊಡುಗೆಯಾಗಿ ನೀಡಿತು.

ಅಶಕ್ತರ ಬದುಕಿನಲ್ಲಿ ಸ್ವಾವಲಂಬನೆ ಮೂಡಿಸುವುದು ಹಾಗೂ ಅಗತ್ಯವಿರುವವರಿಗೆ ನೆರವಿನ ಹಸ್ತ ಚಾಚುವುದು ಇಂತಹ ಸೇವಾ ಕಾರ್ಯಗಳ ಮುಖ್ಯ ಉದ್ದೇಶವಾಗಿದೆ. ಮಡಿಲು ಸೇವಾ ತಂಡ ಮತ್ತು ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಈ ಮಾನವೀಯ ಪ್ರಯತ್ನವು ಸಮಾಜಸೇವೆಯ ಮಹತ್ವವನ್ನು ಸಾರಿತು.

ಪರಸ್ಪರ ಸಹಕಾರ ಮತ್ತು ಸೇವಾ ಮನೋಭಾವದ ಮೂಲಕ ಸಮಾಜದ ಅಶಕ್ತರಿಗೆ ನೆರವಾಗುವ ಇಂತಹ ಕಾರ್ಯಗಳು ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂಬ ಆಶಯ ವ್ಯಕ್ತವಾಯಿತು.