ಯುವ ಬಂಟರ ಸಂಘದಿಂದ ‘ವಿಕ್ರಂ ವೇದ’ ನಾಟಕ ಪ್ರದರ್ಶನ ಯಶಸ್ವಿ

0
14

ಮೂಡುಬಿದಿರೆ : 15 ಜನರ ಎಲ್ಲಾ ಸಮುದಾಯದ ಅಶಕ್ತರಿಗೆ ಸಹಾಯಧನ ಒದಗಿಸುವ ಉದಾತ್ತ ಉದ್ದೇಶದೊಂದಿಗೆ ಯುವ ಬಂಟರ ಸಂಘದ ವತಿಯಿಂದ ಕನ್ನಡ ಭವನ, ಮೂಡುಬಿದಿರೆಯಲ್ಲಿ ಆಯೋಜಿಸಲಾದ “ವಿಕ್ರಂ ವೇದ” ನಾಟಕ ಪ್ರದರ್ಶನವು ಯಶಸ್ವಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಐಕಳ , ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಡಾ. ಮೋಹನ್ ಆಳ್ವ, ಮೂಡುಬಿದಿರೆ ಬಂಟರ ಸಂಘದ ಉಪಾಧ್ಯಕ್ಷರಾದ ಚೇತನ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಯಾದ ಸುಚರಿತ ಶೆಟ್ಟಿ, ಪ್ರೇಮನಾಥ್ ಮಾರ್ಲ, ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಡಾ.ಅಮರಶ್ರೀ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷರು ಶೋಭಾ ಹೆಗ್ಡೆ, ನಿಡ್ಡೋಡಿ ಚಾವಡಿ ಮನೆ ಜಗನಾಥ್ ಶೆಟ್ಟಿ, ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷರು ಶರತ್ ಶೆಟ್ಟಿ, ಶಾಂತಿಪ್ರಸಾದ್ ಹೆಗ್ಡೆ, ಸುಧರ್ಶನ್ ಮೂಡುಬಿದಿರೆ, ಮಿಥುನ್ ರೈ, ಉದಯ ಕುಮಾರ್ ಶೆಟ್ಟಿ, ರಂಜಿತ್ ಪೂಜಾರಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಗೋವಾ ಬಂಟರ ಸಂಘದ ದ ಮಾಜಿ ಅಧ್ಯಕ್ಷರು ಬಾಲಕೃಷ್ಣ ಶೆಟ್ಟಿ ಬೆಳುವಾಯಿ, ಕಾರ್ಕಳ ಬಂಟರ ಸಂಘದ ಅಧ್ಯಕ್ಷರು ವಿಜಯ ಶೆಟ್ಟಿ, ಯುವ ಬಂಟರ ಅಧ್ಯಕ್ಷರು ಸಂದೀಪ್ ಶೆಟ್ಟಿ ಬೆಳುವಾಯಿ, ಉಪಾಧ್ಯಕ್ಷರಾದ ಸಂದೀಪ್ ಶೆಟ್ಟಿ ತೋಡಾರ್, ಕಾರ್ಯದರ್ಶಿ ಯಾದ ರಮೇಶ್ ಶೆಟ್ಟಿ ಮಿಜಾರ್, ಕೋಶಾಧಿಕಾರಿಯಾದ ಭರತ್ ಶೆಟ್ಟಿ ಇರುವೈಲ್, ಗೌತಮ್ ಶೆಟ್ಟಿ ಬೆಳುವಾಯಿ , ಹಾಗೂ ಪದಾಧಿಕಾರಿಗಳು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.