ಮಂಗಳೂರು : ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು ಇದರ 20 ನೇ ವಾರ್ಷಿಕೋತ್ಸವದ ಪ್ರಯುಕ್ತ ಬ್ರಹತ್ ರಕ್ತಧಾನ ಶಿಬಿರವನ್ನು ಮಂಗಳವಾರ ಮಳಿಗೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾರ್ಯಕ್ರಮದಲ್ಲಿ ಮಾತನಾಡಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಗೆ ಶುಭ ಹಾರೈಸಿ, ರಕ್ತಧಾನದ ಮಹತ್ವವನ್ನು ತಿಳಿಸುತ್ತ ಅಗತ್ಯ ಬಿದ್ದರೆ ಚಿನ್ನವನ್ನು ಖರೀದಿ ಮಾಡಬಹುದು ಆದರೆ ರಕ್ತವನ್ನು ಖರೀದಿ ಮಾಡಲು ಸಾಧ್ಯವಿಲ್ಲ , ಮನುಷ್ಯ ಮನುಷ್ಯನಿಗೆ ಕೊಡುವ ಮೂಲಕ ಇನ್ನೊಬರ ಜೀವವನ್ನು ಉಳಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ HIF ಇದರ ಮೆಡಿಕಲ್ ವಿಂಗ್ ನ ಮುಖ್ಯಸ್ಥ ರಿಜ್ವಾನ್ ಪಾಂಡೇಶ್ವರ, ಮಲಬಾರ್ ಸಂಸ್ಥೆಯ ಸಾಮಾಜಿಕ ಬದ್ಧತೆಯನ್ನು, ಕೊಡುಗೆಯನ್ನು ಶ್ಲಾಘಿಸಿದರು.
ಉದ್ಯಮಿ ಮಾಲ್ಕಂ ವೇಗಸ್ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕೆಎಂಸಿಯ ವೈದ್ಯರಾದ ಡಾ. ರಂಜಿತಾ ರಾವ್ ರಕ್ತಧಾನದ ಮಹತ್ವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಲವು ಭಾರಿ ರಕ್ತದಾನ ಮಾಡಿದ ಧಾನಿಗಳಾದ ಸುಧಾಕರ ರೈ, ನಿಝಾಮುದ್ದಿನ್ ಹಕೀಮ್, ರಿತೇಶ್ ಶೆಟ್ಟಿ ಯು, ತೌಫಿಕ್ ಕುಳಾಯಿ, ಅನಿಲ್ ಪಾತ್ರಾವೂ ಇವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಬ್ಲಡ್ ಡೋನಾರ್ಸ್ ಮಂಗಳೂರು ಇದರ ಸ್ಥಾಪಕ ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ, ಹಫೀಝ್ ರೆಹಮನ್ ಸ್ಟೋರ್ ಹೆಡ್, ಅಹಮ್ಮದ್ ನಝರ್ ಉಪ ಶಾಖಾ ಮುಖ್ಯಸ್ಥರು, ರಘುರಾಮ್ ಬ್ರಾಂಚ್ ಮ್ಯಾನೇಜರ್,ಗಿರೀಶ್ ರೈ ಸೇಲ್ಸ್ ಮ್ಯಾನೇಜರ್, ಫರ್ಹನ್ ಮಾರ್ಕೆಟಿಂಗ್ ಮ್ಯಾನೇಜರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

