ರೈಲು ಇಳಿಯುವಾಗ ಕಬ್ಬಿಣದ ಬೇಲಿಯಲ್ಲಿ ಕುತ್ತಿಗೆ ಸಿಲುಕಿ ವ್ಯಕ್ತಿ ಸಾವು

0
440

ಮುಂಬೈ: ರೈಲು ಬಂದು ನಿಲ್ದಾಣದಲ್ಲಿ ನಿಂತಾಗ ವ್ಯಕ್ತಿಯೊಬ್ಬ ಇಳಿಯಬೇಕಿದ್ದ ಬಾಗಿಲು ಬಿಟ್ಟು ಹಿಂಬದಿಯ ಬಾಗಿಲಿನಿಂದ ಹಾರಿದ ಪರಿಣಾಮ ಕಬ್ಬಿಣದ ಬೇಲಿಯಲ್ಲಿ ಕುತ್ತಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮುಂಬೈನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಪಶ್ಚಿಮ ರೈಲ್ವೆ ಜಾಲದಲ್ಲಿರುವ ನಿಲ್ದಾಣದಲ್ಲಿ ಬೆಳಗ್ಗೆ 9.45 ರ ಸುಮಾರಿಗೆ ಈ ಘಟನೆ ನಡೆದಿದೆ.

ಸ್ಥಳೀಯ ರೈಲಿನಿಂದ ಇಳಿಯುವ ಪ್ರಯತ್ನದ ವೇಳೆ, ಬೇಲಿಯಲ್ಲಿ ಸಿಲುಕಿಕೊಂಡು ವ್ಯಕ್ತಿಯ ಕುತ್ತಿಗೆಗೆ ಹಾನಿಯಾಗಿತ್ತು ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ವ್ಯಕ್ತಿ ಹಾರುವ ಸಮಯದಲ್ಲಿ ಆಯತಪ್ಪಿ ಬೇಲಿ ಮೇಲೆ ಬಿದ್ದಿದ್ದಾರೆ, ಮೊನಚಾದ ಸರಳುಗಳು ಕುತ್ತಿಗೆಗೆ ಹೊಕ್ಕಿ ರಕ್ತಸ್ರಾವವಾಗಿತ್ತು.

ಅವರನ್ನು ನಾಯರ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಪ್ರಕಾರ, ಆ ವ್ಯಕ್ತಿ ವಿರುದ್ಧ ದಿಕ್ಕಿನಿಂದ, ಅಂದರೆ ಬೇಲಿ ಪ್ರದೇಶದಿಂದ ಇಳಿಯಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದರು. ಪ್ರಯತ್ನದ ಸಮಯದಲ್ಲಿ, ಅವನ ಕುತ್ತಿಗೆ ಬೇಲಿಯಲ್ಲಿ ಸಿಲುಕಿಕೊಂಡು ಹಾನಿಗೊಳಗಾಯಿತು ಎಂದು ಅಧಿಕಾರಿ ಹೇಳಿದರು.

LEAVE A REPLY

Please enter your comment!
Please enter your name here