ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ ಮಾತನಾಡಿ ಮನುಷ್ಯ ಬದುಕಿನಲ್ಲಿ ನೋವು- ನಲಿವು ಗಳನ್ನು ಬರಹದ ಮೂಲಕ ಸಾದರಪಡಿಸಿದಾಗ ಅದು ಸಾಹಿತ್ಯವಾಗುತ್ತದೆ. ಕವನವನ್ನು ನಾವು ಹೇಗೆ ಹುಟ್ಟು ಹಾಕುವುದು ಎಂಬ ವಿಚಾರಗಳನ್ನು ನಿಮಗೆ ತಲುಪಿಸಲು ಈ ಕರ‍್ಯಾಗಾರವು ನೂರಕ್ಕೆ ನೂರು ಶೇಕಡ ನಿಮಗೆ ಉಪಯೋಗವಾಗುತ್ತದೆ. ನೀವು ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿ ಕರ‍್ಯಕ್ರಮಕ್ಕೆ ಶುಭಹಾರೈಸಿದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಜಯಂತ್ ನಡುಬೈಲು ಸರ್ ಇವರು ಬದುಕಿನುದ್ದಕ್ಕೂ ಸಾಹಿತ್ಯ ಎನ್ನುವುದು ನಮ್ಮಲ್ಲಿ ಅಂರ‍್ಗತವಾಗಿರುವ ದೀಪ್ತಿ . ಇಂತಹ ವೇದಿಕೆಗಳನ್ನು ಸದುಪಯೋಗ ಪಡಿಸಿಕೊಂಡಾಗ ಪ್ರತಿಭೆಗಳು ಅನಾವರಣವಾಗುತ್ತದೆ ಎಂದು ಶುಭಹಾರೈಸಿದರು.

ಇದೇ ವೇಳೆ ಕವನ ರಚನೆ ಮತ್ತು ಅನುಭವ ಕಥನ ಸ್ರ‍್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯರ‍್ಥಿಗಳಿಗೆ ಬಹುಮಾನವನ್ನು ನೀಡಲಾಯಿತು.
ವೇದಿಕೆಯಲ್ಲಿ ಆಂತರಿಕ ಭರವಸೆ ಗುಣಮಟ್ಟ ಕೋಶ ಇದರ ಸಂಯೋಜಕಿಯಾದ ರಶ್ಮಿ, ಅದ್ವಯ ಕನ್ನಡ ಸಾಹಿತ್ಯ ಸಂಘದ ಕರ‍್ಯರ‍್ಶಿಯಾದ ಕು. ದಾಮಿನಿ ಉಪಸ್ಥಿತರಿದ್ದರು.
ಕನ್ನಡ ಭಾಷಾ ವಿಭಾಗ ಮುಖ್ಯಸ್ಥರಾದ ಹರಿಶ್ಚಂದ್ರ ಸಿ ಪ್ರಸ್ತಾವನೆ ಮಾಡಿ, ವಿದ್ಯಾರ‍್ಥಿನಿಯರಾದ ವೀಕ್ಷಾ ದ್ವಿತೀಯ ಬಿಸಿಎ ಮತ್ತು ಸೃಷ್ಟಿ ತೃತೀಯ ಬಿಸಿಎ ಪ್ರರ‍್ಥನೆ ಹಾಡಿ, ಹರಿಪ್ರಸಾದ್ ತೃತೀಯ ಬಿಎ ಅತಿಥಿಗಳ ಪರಿಚಯ ವಾಚನ ಮಾಡಿ, ಕನ್ನಡ ಉಪನ್ಯಾಸಕರಾದ ರಶ್ಮಿತಾ ಸ್ವಾಗತಿಸಿ, ಬಹುಮಾನಿತರ ಪಟ್ಟಿ ವಾಚನ ಮಾಡಿ, ಅಮೃತ್ ರಾಜ್ ವಂದಿಸಿ, ಗ್ರೀಷ್ಮ ದ್ವಿತೀಯ ಬಿ.ಕಾಂ ಕರ‍್ಯಕ್ರಮ ನಿರೂಪಿಸಿದರು.

