ಮನೆಮನೆ ಕನ್ನಡ ಜಾಗೃತಿ ಅಭಿಯಾನ ಜೂ.22ರಂದು ಉದ್ಘಾಟನೆ

0
294

ಮಂಗಳೂರು : ಕಾಸರಗೋಡಿನ ನುಳ್ಳಿಪ್ಪಾಡಿಯ ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಭವನದ ದಕ್ಷಿಣ ಕನ್ನಡ ಜಿಲ್ಲಾ ಘಟಕಗಳ ಜಂಟಿ ಆಶ್ರಯದಲ್ಲಿ ಮಂಗಳೂರಿನ ಜ್ಯೋತಿನಗರದ ಅನಿತಾ ಶೆಣೈ ಅವರ ಮನೆಯಲ್ಲಿ ಜೂ.22ರಂದು ಅಪರಾಹ್ನ 3ರಿಂದ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನ’ ನಡೆಯಲಿದೆ. ಕಾರ್ಯಕ್ರಮವನ್ನು ಕಾಸರಗೋಡಿನ ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ ವಾಮನ್ ರಾವ್ ಬೇಕಲ್ – ಸಂಧ್ಯಾರಾಣಿ ಟೀಚರ್ ಉದ್ಘಾಟಿಸುವರು. ಕೇರಳ ರಾಜ್ಯ ಕನ್ನಡ ಚು. ಸಾ. ಪ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅಧ್ಯಕ್ಷತೆ ವಹಿಸುವರು. ಕೇರಳ ರಾಜ್ಯ ಕನ್ನಡ ಚು. ಸಾ. ಪ ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಅವರು ಘಟಕದ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ಟರಿಗೆ ಕನ್ನಡ ಧ್ವಜ ಹಸ್ತಾಂತರ ಮಾಡಿ ಅಭಿಯಾನಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಕಥಾಬಿಂದು ಪ್ರಕಾಶನದ ಮುಖ್ಯಸ್ಥ ಪಿ. ವಿ ಪ್ರದೀಪ್ ಕುಮಾರ್, ಸತ್ಯವತಿ ಕೊಳಚಪ್ಪು , ಸೌಮ್ಯ ಭಟ್ ಅಂಗ್ರಾಜೆ, ರೋಹಿಣಿ ಭಾಗವಹಿಸುವರು. ರೇಖಾ ಸುದೇಶ್ ರಾವ್, ಆಪೂರ್ವ ಕಾರಂತ ಪುತ್ತೂರು ಸಹಕರಿಸುವರು. ಕಾರ್ಯಕ್ರಮದಲ್ಲಿ ‘ಕನ್ನಡ ಉಳಿಸೋಣ ಬನ್ನಿ – ಕನ್ನಡ ಬೆಳೆಸೋಣ ಬನ್ನಿ’ ಎಂಬ ವಿಚಾರದಲ್ಲಿ ಮುಕ್ತ ಸಂವಾದ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕಿ ಡಾ. ಶಾಂತಾ ಪುತ್ತೂರು ಅಧ್ಯಕ್ಷತೆ ವಹಿಸುವರು. ಕವಿಗೋಷ್ಠಿಯಲ್ಲಿ ಆರ್. ಎ ಗ್ರೇಗೊರಿ, ಜಯಾನಂದ ಪೆರಾಜೆ, ಅಪೂರ್ವ ಕಾರಂತ, ರೇಖಾ ಸುದೇಶ್ ರಾವ್, ಸುಲೋಚನ ಕೊಟ್ಟಾರ, ಶ್ರೀದೇವಿ, ಗಾಯತ್ರಿ ಮನೋಹರ್, ಅನಿತಾ ಶೆಣೈ, ಪಿ. ವಿ. ಪ್ರದೀಪ್ ಕುಮಾರ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಕಸ್ತೂರಿ ಜಯರಾಂ ಮೊದಲಾದವರು ಭಾಗವಹಿಸುವರು.

LEAVE A REPLY

Please enter your comment!
Please enter your name here