ಮಂಗಳೂರು : ಬಿ ಎಸ್ ವೈ ಅಭಿಮಾನೋತ್ಸವ ಅಭಿಯಾನ

0
17

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಸಮಾಜ ಸೇವೆಯ 50 ವರ್ಷಗಳ ಆಚರಣೆಯನ್ನು ಚಿತ್ರದುರ್ಗದಲ್ಲಿ ಅಭಿಮಾನಿಗಳು ಹಮ್ಮಿಕೊಂಡಿರುತ್ತಾರೆ. ಸಂಬಂಧಿತ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಸುಮಾರು 5000ಕ್ಕೂ ಹೆಚ್ಚು ಅಭಿಮಾನಿಗಳು ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನುಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಂಸದ ಬ್ರಿಜೇಶ್ ಚೌಟ ಅವರು ಯಡಿಯೂರಪ್ಪನವರ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ವಿವರಿಸಿ ಅಂತಹ ಉತ್ತಮ ನಾಯಕರ ಸಾರ್ಥಕ 50 ವರ್ಷಗಳ ಸಾರ್ವಜನಿಕ ಸೇವೆಯನ್ನು ನಾವೆಲ್ಲರೂ ಅಭಿನಂದಿಸಬೇಕಾಗಿದೆ. ಅದರಲ್ಲಿಯೂ ಹೆಣ್ಣುಮಕ್ಕಳ ಅಭಿವೃದ್ಧಿಗಾಗಿ ಸಾಕಷ್ಟು ಪ್ರಗತಿಪರ ಕೆಲಸ ಕಾರ್ಯಗಳನ್ನು ಜಾರಿಗೆ ತಂದು ಸಾರ್ವಜನಿಕ ಅಭಿವೃದ್ಧಿಯ ಶಕೆಯನ್ನು ಪ್ರಾರಂಭಿಸಿರುತ್ತಾರೆ.

ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಡಿ ವೇದವ್ಯಾಸ ಕಾಮತ್ ಮಾತನಾಡಿ ಪ್ರಗತಿಪರ ಅಭಿವೃದ್ಧಿಗೆ ಚಾಲನೆಯನ್ನು ಕೊಟ್ಟಂತಹ ಬಿ ಎಸ್ ವೈ ಪ್ರಾತಹಸ್ಮರಣೀಯರು ಎಂದು ಹೊಗಳಿದರು. ಶಾಸಕ ಭರತ್ ಶೆಟ್ಟಿ ಅವರು ಎಲ್ಲರ ಬೆಂಬಲವನ್ನು ಆಶಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರ್ಯಕರ್ತರನ್ನು ಕೇಳಿಕೊಂಡರು.

ಕಾರ್ಯಕ್ರಮದ ಅಂಗವಾಗಿ ವಾಹನಗಳಿಗೆ ಸ್ಟಿಕ್ಕರ್ ಅಂಟಿಸುವ ಅಭಿಯಾನವನ್ನು ಚಾಲನೆ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಕಿಶೋರ್ ಕುಮಾರ್, ಪ್ರೇಮಾನಂದ ಶೆಟ್ಟಿ, ರಮೇಶ್ ಕಂಡೆಟ್ಟು ಇತ್ಯಾದಿ ಪ್ರಮುಖರು ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ
.

LEAVE A REPLY

Please enter your comment!
Please enter your name here