ಮಂಗಳೂರು : ಜ.17 (ಇಂದು) ತುಳು ಶಿಕ್ಷಕರ ಕಾರ್ಯಗಾರ

0
28

ಮಂಗಳೂರು : ಜ.17 (ಇಂದು) ತುಳು ಶಿಕ್ಷಕರ ಕಾರ್ಯಗಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತುಳು ಭಾಷಾ ಶಿಕ್ಷಕರಿಗಾಗಿ ಶನಿವಾರದಂದು ಮಂಗಳೂರಿನ ತುಳು ಭವನದಲ್ಲಿ ಕಾರ್ಯಗಾರವನ್ನು ಆಯೋಜಿಸಿದೆ.

ಬೆಳಿಗ್ಗೆ 11.00 ಗಂಟೆಗೆ ತುಳು ಭವನದ ‘ಎಸ್ .ಯು ಪಣಿಯಾಡಿ ತುಳುನಾಡ ಚಾವಡಿ’ ಯಲ್ಲಿ ಕಾರ್ಯಗಾರವನ್ನು ನಿವೃತ್ತ ತುಳು ಭಾಷಾ ಶಿಕ್ಷಕ ದಿನೇಶ್ ಆರ್ .ಶೆಟ್ಟಿಗಾರ್ ಅವರು ಉದ್ಘಾಟಿಸುವರು.
ನಿವೃತ್ತ ಉಪನ್ಯಾಸಕ ಡಾ.ವಿಶ್ವನಾಥ ಬದಿಕಾನ ಅವರು ಈ ಕಾರ್ಯಾಗಾರವನ್ನು ನಡೆಸಿಕೊಡುವರು. ವಿವಿಧ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ತುಳು ಪಠ್ಯವನ್ನು ಬೋಧಿಸುತ್ತಿರುವ ಶಿಕ್ಷಕರು ಈ ಕಾರ್ಯಗಾರದಲ್ಲಿ ಭಾಗವಹಿಸುವರು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here