ಮಂಗಳೂರು : ವೆಸ್ಲಾಕ್ ಆಸ್ಪತ್ರೆಗೆ ರೂ. 10 ಲಕ್ಷ ಮೌಲ್ಯದ ವೈದ್ಯಕೀಯ ಯಂತ್ರೋಪಕರಣ ಕೊಡುಗೆ

0
29

ಮಂಗಳೂರು : “ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉನ್ನತ ಮಟ್ಟದ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ರೋಟರಿ ಮಂಗಳೂರು ಡೌನ್ ಟೌನ್ ಮತ್ತು ರೋಟರಿ ಮಂಗಳೂರು ಹಿಲ್ ಸೈಡ್ ಸಂಸ್ಥೆಯು ಆಧುನಿಕ ಶೈಲಿಯ ಅಲ್ಪ ಸೌಂಡ್ ವೈದ್ಯಕೀಯ ಯಂತ್ರೋಪಕರಣ ದಾನದ ರೂಪದಲ್ಲಿ ನೀಡಿದೆ” ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಶಿವಪ್ರಕಾಶ್ ಮಾಹಿತಿ ನೀಡಿದ್ದಾರೆ. ಅವರು ತಾ. 18.04.2026 ರಂದು ನಗರದ ಪ್ರಾದೇಶಿಕ, ಅತ್ಯಾಧುನಿಕ ಮಕ್ಕಳ ಚಿಕಿತ್ಸಾ ಕೇಂದ್ರದ ಸಭಾಂಗಣದಲ್ಲಿ, ರೋಟರಿ ಸಂಸ್ಥೆಯ ಯಂತ್ರೋಪಕರಣ ಹಸ್ಟ್ರಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಭಿಕರನ್ನು ಉದ್ದೇಶಿಸಿ ಮಾತನಾಡಿ ಆರೋಗ್ಯ ಸೇವೆ ಕ್ಷೇತ್ರಕ್ಕೆ ರೋಟರಿ ಸಂಸ್ಥೆಯ ಕೊಡುಗೆ ಅಪಾರ ಮತ್ತು ಅಮೂಲ್ಯ ಎಂದು ನುಡಿದರು.

ಜಿಲ್ಲಾ ಆರೋಗ್ಯ ಅಧಿಕಾರಿಯವರಾದ ಡಾ. ತಿಮ್ಮಯ್ಯ ಹೆಚ್.ಆರ್. ಸಮಾಜದ ಆರೋಗ್ಯ ಕ್ಷೇತ್ರಕ್ಕೆ ರೋಟರಿ ಸಂಸ್ಥೆಯು ನೀಡುವ ಕಾರ್ಯ ಅಮೂಲ್ಯ ಮತ್ತು ಶ್ಲಾಘನೀಯ ಎಂದು ನುಡಿದು ಬಡವರಿಗೆ ಉತ್ತಮ ಮತ್ತು ಅತ್ಯಾಧುನಿಕ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಣಮಿಸಲಿದೆ ಎಂದು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ರಿಸ್ಕನೆಕ್ಟ್ ಸಂಸ್ಥೆಯ ನಿರ್ದೇಶಕಿಯವರಾದ ಶ್ರೀಮತಿ ಶುಭ ಅವರು ಈ ಯಂತ್ರೋಪಕರಣವನ್ನು ನಮ್ಮ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ಅಂಗವಾಗಿ ಪ್ರಾಯೋಜಿಸಲಾಗಿದೆ ಎಂದು ನುಡಿದು ಸಾಂಕೇತಿಕವಾಗಿ ದಾಖಲೆ ಪತ್ರಗಳನ್ನು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.

ವೆಸ್ಲಾಕ್ ಆಸ್ಪತ್ರೆಯ ಅರಿವಳಿಕೆ ತಜ್ಞರಾದ ಡಾ. ರಂಜನ್ ರಾವ್ ರವರು ಈ ಯಂತ್ರೋಪಕರಣದ ಕಾರ್ಯನಿರ್ವಹಣೆ, ಚಿಕಿತ್ಸೆಯ ವಿಧಾನದ ಬಗ್ಗೆ ಮಾಹಿತಿ ನೀಡಿ ಇದು ರೂ. 10 ಲಕ್ಷ ಮೌಲ್ಯದದ್ದಾಗಿದೆ ಎಂದು ನುಡಿದರು.

ರೋಟರಿ ಮಂಗಳೂರು ಡೌನ್ ಟೌನ್ ಸಂಸ್ಥೆಯ ಅಧ್ಯಕ್ಷ ಸತ್ಯಜೀತ್ ರಾವ್‌ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಯೋಜನೆಯನ್ನು ತಮ್ಮ ಸಂಸ್ಥೆಯ ಸಮಾಜಸೇವಾ ಅಂಗವಾಗಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ರೋಟರಿ ಮಂಗಳೂರು ಹಿಲ್ ಸೈಡ್ ಸಂಸ್ಥೆಯ ಅಧ್ಯಕ್ಷ ಪೀಟ‌ರ್ ಅಂತೋನಿ ಪಿಂಟೋ ಸ್ವಾಗತಿಸಿದರು. ವೆಸ್ಲಾಕ್ ಆಸ್ಪತ್ರೆಯ ಡಾ. ಸುರೇಶ್ ಭಟ್ ವಂದಿಸಿದರು. ವೇದಿಕೆಯಲ್ಲಿ ವೆಸ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ. ಸುಧಾಕರ್, ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಡಾ. ಶಿವಪ್ರಸಾದ್, ರಂಗನಾಥ್ ಭಟ್, ಉಮೇಶ್ ಕಿಣಿ, ವಾಸುದೇವ್ ಶೆಟ್ಟಿಗಾರ್, ಏಕನಾಥ್ ದಂಡಕೇರಿ, ಸೂರಜ್ ಹೆಬ್ಬಾರ್ ಉಪಸ್ಥಿತರಿದ್ದರು.

ವರದಿ : ಎಂ.ವಿ. ಮಲ್ಯ

LEAVE A REPLY

Please enter your comment!
Please enter your name here