ಬಂಟ್ವಾಳ : ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್, ವಿದ್ಯಾಗಿರಿಇಲ್ಲಿ2025-26ನೇ ಸಾಲಿನ ಒಟ್ಟು39 ಮಂದಿ ವಿದ್ಯಾರ್ಥಿಗಳು ಹತ್ತನೇ ತರಗತಿ ಸಿಬಿಎಸ್‌ಇ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು, 21ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ಶಾಲೆ ಸತತ 15ನೇ ಬಾರಿ ಶೇ.100 ಫಲಿತಾಂಶ ದಾಖಲಿಸಿರುತ್ತದೆ.
ದೇವಿಶ್ ಎಸ್‌ರೈ(97.8%), ಅನನ್ಯಎಂ(96.8%), ಧೃತಿಎಚ್(96.4%), ರಚನ್ ಸುವರ್ಣ(96.4%), ದ್ವಿತಿ ಆಳ್ವ ಕರಿಂಕ(94.8%), ಸಾಯಿ ವೈಷ್ಣವಿ(94.2%), ಪ್ರಥ್ವಿಕಾಎನ್‌ಜೆ(93.2%), ವಿವಾನ್ ಮೆಲ್ರಿಕ್ ಮೆನೆಜಸ್(93.2%), ಮಹಾ ಎಸ್‌ರೈ(90.6%)ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ.
ಇವರಿಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಕೂಡಿಗೆ ಪಾಂಡುರಂಗ ಶೆಣೈ, ಕರ‍್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್ ಮತ್ತು ಎಸ್.ವಿ.ಎಸ್. ಸಮೂಹ ಸಂಸ್ಥೆಗಳ ಸಂಚಾಲಕಿ ಕೆರೇಖಾ ಶೆಣೈ, ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

