ಮಂಗಳೂರು : ನಾಡಿನೆಲ್ಲೆಡೆ ಸಕಾಲಿಕ ಮಳೆ-ಬೆಳೆ ಹಾಗೂ ಜಗತ್ತಿನಲ್ಲಿ ಎದುರಾಗಿರುವ ಯುದ್ಧದ ವಾತಾವರಣ ಕೊನೆಗೊಂಡು ಶಾಂತಿ-ನೆಮ್ಮದಿ ನೆಲೆಸಲಿ ಎಂದು ಟೀಂ ಪಿಲಿ ಅಜನೆ ಮಂಗಳೂರು ತಂಡದಿಂದ ಕುದ್ರೋಳಿ ಶ್ರೀ ಭಗವತಿ ದೇವಸ್ಥಾನದಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಮಂಗಳೂರು ದಸರಾ ಸಂದರ್ಭದಲ್ಲಿ, ಹುಲಿ ಕುಣಿತದ ಮೂಲಕ ತುಳುನಾಡಿನ ಸಂಸ್ಕೃತಿಯ ಉಳಿವಿಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಈ ತಂಡವು, ಇದೀಗ ಲೋಕ ಕಲ್ಯಾಣಾರ್ಥವಾಗಿ ಕುದ್ರೋಳಿ ಶ್ರೀ ಭಗವತಿ ದೇವಸ್ಥಾನ,ಅಮ್ಮನವರ ಮೊರೆ ಹೋಗಿದ್ದಾರೆ. ಈ ಬಾರಿ ಮಳೆರಾಯ ಕೈ ಕೊಟ್ಟಿದ್ದು, ನಾಡಿನ ಕೆಲವೆಡೆ ಮಳೆಗಾಲದಲ್ಲೂ ನೀರಿಗಾಗಿ ಪರಿತಪಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ಸಕಾಲಿಕ ಮಳೆ-ಬೆಳೆಗಾಗಿ ಮತ್ತು ಜಗತ್ತಿನಲ್ಲಿ ಯುದ್ಧದ ವಾತಾವರಣ ಕೊನೆಗೊಂಡು ಶಾಂತಿ, ನೆಮ್ಮದಿ ನೆಲೆಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ, ಟೀಂ ಪಿಲಿ ಅಜನೆ ಮಂಗಳೂರು ತಂಡದ ಮುಂದಾಳು ಪ್ರಮೋದ್ ಕರ್ಕೇರಾ, ರಮೇಶ್ ಕೆ. ಮುಖ್ಯ ಸಲಹೆಗಾರರು ಶಕ್ತಿ ಎಜುಕೇಶನ್ ಟ್ರಸ್ಟ್ ಮಂಗಳೂರು , ಸಪ್ನಾ ಮೋಹನ್ ಅಮೀನ್, ಕುಮಾರಿ ಸುಷ್ಮಾ, ಕುಮಾರಿ ಹರ್ಷಿತಾ, ಪ್ರದೀಪ್, ಅಭಿಷೇಕ್, ಹರ್ಷಿತ್, ಕಾರ್ತಿಕ್, ರಂಜಿತ್ ಹಾಗೂ ಅನೇಕ ಭಕ್ತಾಧಿಮಾನಿಗಳು ಈ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿದರು.

