ಮಂಗಳೂರು: ಗಾಂಜಾ ಸುವಾಸನೆ ಇರುವ ಚಾಕಲೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯೊಬ್ಬನನ್ನು ಮಂಗಳೂರಿನ ಪಂಪ್‌ವೆಲ್ ಬಳಿ ಇರುವ ಪಾನ್ ಗೂಡಂಗಡಿಯಲ್ಲಿ ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಸುಜಿತ್ ಕುಮಾರ್ ಬಂಧಿತ ಆರೋಪಿ. ಗೂಡಂಗಡಿಯೊಂದರಲ್ಲಿ ಗಾಂಜಾ ಮಿಶ್ರಿತ ಚಾಕಲೇಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಅಂಗಡಿಯಲ್ಲಿ ಮಾದಕ ದ್ರವ್ಯ ಮಿಶ್ರಿತ ಚಾಕಲೇಟ್‌ಗಳನ್ನು ದಾಸ್ತಾನು ಇರಿಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ಕೇಸು ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಅಬಕಾರಿ ಇಲಾಖೆಯ ಮಂಗಳೂರು ಉತ್ತರ ವಿಭಾಗದ ಉಪ ಅಧೀಕ್ಷಕಿ ಗಾಯತ್ರಿ ಸಿ.ಹೆಚ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಿರೀಕ್ಷಕಿ ಸುನೀತಾ, ಉಪ ನಿರೀಕ್ಷಕ ಸುಧೀರ್ ಕುಮಾರ್, ಹರೀಶ್, ಸಿಬ್ಬಂದಿ
ಸಂಧ್ಯಾ, ಹರೀಶ, ಮಾರುತಿ ಡಿ.ಜೆ. ಅವರು ಪಾಲ್ಗೊಂಡಿದ್ದರು.