
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆ ‘ಗೃಹಲಕ್ಷಿö್ಮ’ ಹಣ ಬಳಸಿ ಸ್ವಂತ ಟೈಲರಿಂಗ್ ಮತ್ತು ವಸ್ತçಮಳಿಗೆ ಆರಂಭಿಸಿ ಗಮನ ಸೆಳೆದಿದ್ದಾರೆ.
ಇಲ್ಲಿನ ಮಾವಿನಕಟ್ಟೆ ನಿವಾಸಿ, ‘ಗೃಹಲಕ್ಷಿö್ಮ’ ಯೊಜನೆ ಫಲಾನುಭವಿ ಶಕುಂತಲಾ ಎಂಬವರು ತನಗೆ ಪ್ರತೀ ತಿಂಗಳು ಬರುತ್ತಿದ್ದ ತಲಾ ರೂ 2ಸಾವಿರ ಮೊತ್ತ ಕೂಡಿಟ್ಟ ಹಣದಲ್ಲಿ ತನ್ನ ಕನಸಿನಂತೆ ‘ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್ ಟೈಲ್ಸ್ & ಗಾರ್ಮೆಂಟ್ಸ್’ ಆರಂಭಿಸಿದ್ದಾರೆ. ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ಗುರುವಾರ ಶುಭಾರಂಭಗೊAಡ ಈ ಮಳಿಗೆಗೆ ಬಂಟ್ವಾಳ ತಾಲ್ಲೂಕು ಪಂಚಗ್ಯಾರAಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಸಹಿತ ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾರಾಯಣ ನಾಯ್ಕ ಇವರು ತೆರಳಿ ಅಭಿನಂದಿಸಿದ್ದಾರೆ.

ಫಲಾನುಭವಿ ಶಕುಂತಲಾ ಅವರ ಸಾಧನೆ ಇತರ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದು, ಮಹಿಳಾ ಸ್ವಾವಲಂಬನೆಗೆ ಪ್ರೇರಣಾದಾಯಕವಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ತಿಳಿಸಿದ್ದಾರೆ.
ನಾನು ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ರೂ 72 ಸಾವಿರ ಮೊತ್ತ ‘ಗೃಹಲಕ್ಷಿö್ಮ’ ಹಣ ಸಂಗ್ರಹಿಸಿ, ಒಟ್ಟು ರೂ 2.50 ಲಕ್ಷ ವೆಚ್ಚದಲ್ಲಿ ಎರಡು ಟೈಲರಿಂಗ್ ಯಂತ್ರ ಸಹಿತ ಟೆಕ್ಸ್ ಟೈಲ್ ಆರಂಭಿಸಿದ್ದೇನೆ. ನನ್ನ ಪತಿ ಜಯಾನಂದ ಅವರು ಚಾಲಕ ವೃತ್ತಿಯಲ್ಲಿದ್ದು, ಇಬ್ಬರು ಪುತ್ರರು ವಿದ್ಯಾರ್ಥಿಯಾಗಿದ್ದಾರೆ ಎಂದು ಫಲಾನುಭವಿ ಶಕುಂತಳಾ ಪ್ರತಿಕ್ರಿಯಿಸಿದ್ದಾರೆ.
-ಮೋಹನ್ ಕೆ.ಶ್ರೀಯಾನ್ ರಾಯಿ
