
ಬಂಟ್ವಾಳ : ಇಲ್ಲಿನ ಇರ್ವತ್ತೂರು ಶ್ರೀ ಶಾರದೋತ್ಸವ ಸೇವಾ ಸಮಿತಿ ಮತ್ತು ಶ್ರೀ ಶಾರದ ಸೇವಾ ಟ್ರಸ್ಟ್ ಇದರ ದಶಮಾನೋತ್ಸವ ಪ್ರಯುಕ್ತ ಈಚೆಗೆ ನಡೆದ ದಸರಾ ಕ್ರೀಡೋತ್ಸವದಲ್ಲಿ ವಿವಿಧ ಕ್ಷೇತ್ರದ 10 ಮಂದಿ ಸಾಧಕರು ಮತ್ತು ಎರಡು ಸಂಘಟನೆಗಳಿಗೆ ‘ದಶಾರದ ಪುರಸ್ಕಾರ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಅ.18 ಮತ್ತು 19 ರಂದು ನಡೆಯಲಿರುವ ಶ್ರೀ ಶಾರದಾ ಪೂಜಾ ದಶಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೂಡುಪಡುಕೋಡಿ ಶಾಲಾ ವಠಾರದಲ್ಲಿ ಈಚೆಗೆ ದಸರಾ ಕ್ರೀಡೋತ್ಸವ ನಡೆಯಿತು. ತಂತ್ರಿ ಬಾಲಕೃಷ್ಣ ಪಾಂಗಣ್ಣಾಯ ನಡ್ವಂತಾಡಿ (ಧಾರ್ಮಿಕ ಮತ್ತು ವೈದಿಕ ಸೇವೆ), ಅಬ್ದುಲ್ ನಝೀರ್ ಸಾಹೇಬ್ ಇರ್ವತ್ತೂರು ( ಉದ್ಯಮ ಮತ್ತು ಸಾಮಾಜಿಕ ಸೇವೆ), ಡೇನಿಸ್ ಫೆರ್ನಾಂಡಿಸ್ ದೇರೊಟ್ಟು( ಕೃಷಿ ಮತ್ತು ಸಾಮಾಜಿಕ ಸೇವೆ), ವೆಂಕಪ್ಪ ಮೂಲ್ಯ ಬಂಗೇರಕೆರೆ( ನಿವೃತ್ತ ಯೋಧ ಮತ್ತು ಸಾಮಾಜಿಕ ಸೇವೆ), ದೇಜಪ್ಪ ಬಾಚಕೆರೆ( ದೈವರಾದನೆ ಮತ್ತು ಧಾರ್ಮಿಕ ಸೇವೆ), ಆಲದಪದವು ಗೋಪಾಲ ಅಂಚನ್( ಸಾಹಿತ್ಯ ಮತ್ತು ಸಾಂಸ್ಕ್ರತಿಕ ಸೇವೆ), ರತ್ನದೇವ್ ಪುಂಜಾಲಕಟ್ಟೆ( ಕಲೆ ಮತ್ತು ಮಾಧ್ಯಮ ಸೇವೆ),ಮುರಳಿಕೃಷ್ಣ ರಾವ್( ಚಿತ್ರಕಲೆ ಮತ್ತು ರಂಗಭೂಮಿ ಸೇವೆ), ವಿಷ್ಣುಪ್ರಿಯಾ ಪೈ( ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧಕಿ), ಸಹನಾ ಎಂ.ಶೆಟ್ಟಿ ನರ್ವಲ್ದಡ್ಡ( ಭರತನಾಟ್ಯ ಮತ್ತು ಕರಾಟೆ ಶಿಕ್ಷಕಿ) ಹಾಗೂ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಇರ್ವತ್ತೂರು ಘಟಕ (ಗ್ರಾಮೀಣಾಭಿವೃದ್ಧಿ ಸೇವೆ), ಕೆ.ಕೆ.ಆರ್. ಸ್ಪೋರ್ಟ್ಸ್ ಕ್ಲಬ್ & ಹೆಲ್ತ್ ಲೈನ್ ಇರ್ವತ್ತೂರು ಕಲಾಬಾಗಿಲು( ಕ್ರೀಡೆ ಮತ್ತು ಆರೋಗ್ಯ ಸೇವೆ) ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ಸ್ಥಳೀಯ ಶಿಕ್ಷಕರಿಗೆ ಗುರುವಂದನೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಪ್ರಮುಖರಾದ ಹರ್ಷ ಸಂಪಿಗೆತ್ತಾಯ, ಅಬ್ದುಲ್ ರಜಾಕ್ ಅನಂತಾಡಿ, ಪ್ರಭಾಕರ ಪ್ರಭು, ಲಾದ್ರೂ ಮಿನೇಜಸ್, ಸುದರ್ಶನ್ ಬಜ ಶುಭ ಹಾರೈಸಿದರು. ಟ್ರಸ್ಟ್ ಅಧ್ಯಕ್ಷ ಡಾ.ರಾಮಕೃಷ್ಣ ಎಸ್., ಕಾರ್ಯಾಧ್ಯಕ್ಷ ಟಿ.ಹರೀಂದ್ರ ಪೈ, ಉಪಾಧ್ಯಕ್ಷ ಶೇಖರ್ ಪೂಜಾರಿ ಅಗಲ್ದೋಡಿ, ಸಂಚಾಲಕ ಮೋಹನ್ ಶೆಟ್ಟಿ ನರ್ವಲ್ದಡ್ಡ, ಪ್ರಧಾನ ಕಾರ್ಯದರ್ಶಿ ದಯಾನಂದ ಎಸ್.ಎರ್ಮೆನಾಡು, ನಿರ್ದೇಶಕರಾದ ಸುದೀಂದ್ರ ಶೆಟ್ಟಿ ಎರ್ಮೆನಾಡು, ಸುಪ್ರೀತ್ ಜೈನ್ ಎಡ್ತೂರುಗುತ್ತು, ಹರೀಶ ಪೂಜಾರಿ ಎರ್ಮೆನಾಡು, ಪ್ರಶಾಂತ ದೇವಾಡಿಗ ಹಲೆಪ್ಪಾಡಿ, ಶೇಖರ ಕರ್ಕೇರಾ ಕಯ್ಯಾಬೆ, ದಶಮಾನೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಬೆನಕ, ಸಮಿತಿ ಸಂಚಾಲಕ ಶಂಕರ ಶೆಟ್ಟಿ ಬೆದ್ರಮಾರು, ಸಮಿತಿ ಕಾರ್ಯದರ್ಶಿ ಚಂದ್ರಹಾಸ ನಾಯ್ಕ ಎರ್ಮೆನಾಡು ಮತ್ತಿತರರು ಇದ್ದರು.
