ಜ.11 ರಂದು ಜನನಿ ಮಿತ್ರ ಮಂಡಳಿಯ ರಜತ ಸಂಭ್ರಮದ ಅಂಗವಾಗಿ ಮ್ಯಾರಥಾನ್ ಓಟ

0
14

ಕಾರ್ಕಳ: ಕಾರ್ಕಳ ತಾಲೂಕಿನ ಅತ್ತೂರು ನಿಟ್ಟೆ ಗ್ರಾಮದ ವಾಂಟ್ರಾಯಿ ಪದವಿನ ‘ಜನನಿ ಮಿತ್ರ ಮಂಡಳಿ (ರಿ.)’ ತನ್ನ ಅರ್ಥಪೂರ್ಣ 25 ವರ್ಷಗಳ ಸುದೀರ್ಘ ಪಯಣದ ಸವಿನೆನಪಿಗಾಗಿ “ರಜತ ಸಂಭ್ರಮ”ವನ್ನು ಆಚರಿಸುತ್ತಿದೆ. ಈ ವಿಶೇಷ ಸಂದರ್ಭದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ದೈಹಿಕ ಕ್ಷಮತೆ ಮತ್ತು ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ 11-01-2026ರ ಭಾನುವಾರದಂದು ಬೃಹತ್ “ಮ್ಯಾರಥಾನ್ ಓಟ 2026” ಅನ್ನು ಆಯೋಜಿಸಲಾಗಿದೆ.

“ಆರೋಗ್ಯದ ಕಡೆ ನಮ್ಮ ಓಟ” ಎಂಬ ಆಶಯದೊಂದಿಗೆ ಆಯೋಜಿತವಾಗಿರುವ ಈ ಕ್ರೀಡಾಕೂಟವು ಬೆಳಿಗ್ಗೆ 6.30 ಗಂಟೆಗೆ ಗುಂಡ್ಯಡ್ಕ ವೃತ್ತದಿಂದ ಅಧಿಕೃತವಾಗಿ ಚಾಲನೆ ಪಡೆಯಲಿದೆ. ಸ್ಥಳೀಯ ಯುವಶಕ್ತಿಯನ್ನು ಸಂಘಟಿಸುವ ಮತ್ತು ಸದೃಢ ಸಮಾಜ ನಿರ್ಮಾಣದ ಗುರಿಯನ್ನು ಹೊಂದಿರುವ ಈ ಮ್ಯಾರಥಾನ್‌ನಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. 25 ವರ್ಷಗಳ ಕಾಲ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯು, ತನ್ನ ಬೆಳ್ಳಿ ಹಬ್ಬವನ್ನು ಕ್ರೀಡಾ ಚಟುವಟಿಕೆಯ ಮೂಲಕ ಆಚರಿಸುತ್ತಿರುವುದು ವಿಶೇಷವಾಗಿದೆ.

LEAVE A REPLY

Please enter your comment!
Please enter your name here