ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ(ರಿ) ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ವತಿಯಿಂದ ಮರಿಯಲದ ನೆಂಪು ಎಸಲ್ -5 ರ ತುಳುನಾಡ್ದ ಗೊಬ್ಬುಲು ವಾರ್ಷಿಕ ವಿಶೇಷ ಕಾರ್ಯಕ್ರಮವು ಇತ್ತೀಚೆಗೆ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಗತಿ ಪರ ಕೃಷಿಕರು ಶೀನ ಮೂಲ್ಯ ಅಲ್ಲಿಪಾದೆ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಯುವ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದ ಅಭಿವೃದ್ಧಿಗೆ ಯುವ ಪಡೆಯನ್ನು ಸಂಘಟಿಸಲು ಜೆನ್ಜಿಯನ್ನು 20 ವರುಷ ಮುಂಚೆಯೇ ಯುವ ವೇದಿಕೆ ಸಾಕಾರಗೊಳಿಸಿತ್ತು.ಅಂದು ಬಿತ್ತಿದ ಬೀಜ ಇಂದು ಹೆಮ್ಮರವಾಗಿ ಬೆಳೆದು ಫಲ ನೀಡುತ್ತಿದ್ದು ಸಮಾಜ ಮುಖಿ ಸೇವೆಯೊಂದಿಗೆ ಮುನ್ನಡೆಯುತ್ತಿದೆ.

ಹಿರಿಯರ ಮಾರ್ಗದರ್ಶನ ಇವರಿಗಿದೆ. ಈ ಬಳಗ ಜನಸ್ನೇಹಿ ಸಂಘಟನೆಯಾಗಿ ಬೆಳೆದು ನಿಂತಿರುವುದು ಸಂತೋಷವಾಗುತ್ತಿದೆ ಎಂದರು ಬಂಟ್ವಾಳದಲ್ಲಿ ಯುವವೇದಿಕೆಯ ಬಲಿಷ್ಟ ಪಡೆ ಇದ್ದು ಮುಂದಿನ ದಿನಗಳಲ್ಲಿ ಯುವವೇದಿಕೆಯ ಕಾರ್ಯಾಲಯ ಬಂಟ್ವಾಳದಲ್ಲಿ ಆಗಬೇಕು ಎಂದು ಹೇಳಿದರು. ಈ ಸಂಧರ್ಭದಲ್ಲಿ ಕುಲಾಲ ಭೀಷ್ಮ ಪ್ರಶಸ್ತಿಯನ್ನು ಸಮಾಜ ಸಮುದಾಯದ ಸೇವಕ ಸೋಮಯ್ಯ ಮೂಲ್ಯ ಹನೈನಡೆ ಇವರಿಗೆ ಪ್ರಧಾನ ಮಾಡಲಾಯಿತು.
ಹಾಗೂ 2026 ರ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದಾಮೋದರ ಮಾಸ್ಟರ್ ಏರ್ಯ ಮತ್ತು ಝೀ ನ್ಯೂಸ್ ಕನ್ನಡ ವಾಹಿನಿಯ ಐಡಲ್ ಪ್ರಶಸ್ತಿ ಪುರಸ್ಕಾರ ಪಡೆದ ಸದಾನಂದ ಬಿ. ಬಂಗೇರ ಇವರನ್ನು ಗೌರವಿಸಲಾಯಿತು. ಮೂಡಿಗೆರೆ ಕುಲಾಲ ಸಂಘದ ಅಧ್ಯಕ್ಷರಾದ ಹರೀಶ್ ಮೂಡಿಗೆರೆ,ಹಾಸನದ ಉದ್ಯಮಿ ತಿಮ್ಮಪ್ಪ ಕುಂಬಾರ್ ಶೆಟ್ಟಿ, ದ. ಕ.ಕ್ಯಾಟರಿಂಗ್ ಮಾಲಕರ ಸಂಘ ಬಂಟ್ವಾಳ ವಲಯದ ಅಧ್ಯಕ್ಷ ಚೆನ್ನಪ್ಪ ಕುಲಾಲ್ ಮಾಣಿ, ಬಂಟ್ವಾಳ ಕುಲಾಲ ಸಂಘದ ಗೌರವ ಅಧ್ಯಕ್ಷರಾದ ಮಚ್ಚೇಂದ್ರ ಸಾಲಿಯಾನ್, ನಂತೂರು ಪಾದುವಾ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ರೇಷ್ಮಾ ವಿನಯ್ ಕಡೆಗೋಲಿ,ಚಲನಚಿತ್ರ ನಟಿ ಜ್ಯೋತಿ ಕುಲಾಲ್ ಪುತ್ತೂರು,ಸಿವಿಲ್ ಇಂಜಿನಿಯರ್ ನಾಗೇಶ್ ಕುಲಾಲ್ ನರಿಕೊಂಬು, ಬಂಟ್ವಾಳ ಕುಲಾಲ ಹಿರಿಯ ನಾಗರಿಕರ ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ಸಾಲ್ಯಾನ್ ಸೊರ್ನಾಡು,ಕುಂಬಾರರ ಮಹಿಳಾ ಸಂಘದ ಅಧ್ಯಕ್ಷೆ ವಸಂತಿ ಭೋಜ ಸಾಲ್ಯಾನ್, ಯುವ ವೇದಿಕೆಯ ರಾಜ್ಯ ಮಹಿಳಾ ಸಂಚಾಲಕಿ ಭಾರತಿ ಶೇಷಪ್ಪ,ಜಿಲ್ಲಾಧ್ಯಕ್ಷರಾದ ಅನಿಲ್ ದಾಸ್, ಯುವ ವೇದಿಕೆಯ ಉಪಾಧ್ಯಕ್ಷರಾದ ರಾಮಚಂದ್ರ ದೈಪಳ, ಮಹಿಳಾ ಸಂಚಾಲಕಿ ದುರ್ಗಾಶ್ರೀ ಪ್ರದೀಪ್,ಕಾರ್ಯದರ್ಶಿ ಕಿಶೋರ್ ಬಂಗೇರ ಏರ್ಯ,ಕೋಶಾಧಿಕಾರಿ ಸಂತೋಷ್ ಮಯ್ಯರಬೈಲು ಉಪಸ್ಥಿತರಿದ್ದರು ವಿಭಾಗಿಯ ಅಧ್ಯಕ್ಷರಾದ ಸುಕುಮಾರ್ ಬಂಟ್ವಾಳ ಪ್ರಸ್ತಾವಿಸಿ ಸ್ವಾಗತಿಸಿದರು,ಸಂತೋಷ್ ಮರ್ತಾಜೆ ವಂದಿಸಿ ಎಚ್ಕೆ ನಯನಾಡು ನಿರೂಪಿಸಿದರು.
ಬೆಳಿಗ್ಗೆ ಸಮುದಾಯದ ಬಂಧುಗಳಿಗೆ ನಡೆದ ಕ್ರೀಡಾಕೂಟವನ್ನು ಯುವವೇದಿಕೆಯ ರಾಜ್ಯಾಧ್ಯಕ್ಷರಾದ ಸುಧಾಕರ್ ಸಾಲಿಯಾನ್ ಉಧ್ಘಾಟಿಸಿದರು. ಅತಿಥಿಗಳಾಗಿ ರಾರಾಸಂ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಬಂಟ್ವಾಳ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಆನಂದ ಕುಲಾಲ್ ಮಿತ್ತ ಪರಾರಿ, ಶಿಕ್ಷಕಿ ವಿಧ್ಯಾಶ್ರಿ ಕುಲಾಲ್, ಸುಕುಮಾರ್ ಬಂಟ್ವಾಳ ಉಪಸ್ಥಿತರಿದ್ದರು. ನಿತೇಶ್ ಪಲ್ಲಿಕಂಡ ಸ್ವಾಗತಿಸಿದರು. ಮಧ್ಯಾಹ್ನ ಸಮುದಾಯದ ಮನೆಯಲ್ಲಿ ತಯಾರಿಸಿದ ಕೈಯಡುಗೆಯ 60 ಕ್ಕೂ ಮಿಕ್ಕಿ ಖಾಧ್ಯಗಳ ಭೋಜನ ವ್ಯವಸ್ಥೆ ಇತ್ತು. ಸಂಜೆ ನಡೆದ ಸ್ಪರ್ಧಾ ಬಹುಮಾನ ನೀಡುವ ಕಾರ್ಯಕ್ರಮದಲ್ಲಿ ಬೆಂಗಳೂರು ಉಧ್ಯಮಿ ರಮೇಶ್ ಬಾಳೆಹಿತ್ಲು ಮತ್ತು ಬೂಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ರಾಜ್ಯ ಉಪಾಧ್ಯಕ್ಷ ಮಾಧವ ಕುಲಾಲ್ ಬಿ.ಸಿ.ರೋಡ್ ಅತಿಥಿಗಳಾಗಿ ಭಾಗವಹಿಸಿದ್ದರು.ಪುನೀತ್ ಕಾಮಾಜೆ ಕ್ರೀಡಾ ವಿಜೇತರ ಪಟ್ಟಿ ವಾಚಿಸಿ ನಿರೂಪಿಸಿದರು.
ಟಿ.ಸೇಷಪ್ಪ ಮಾಸ್ಟರ್, ಗಣೇಶ್ ಕಾಮಾಜೆ, ದಿವ್ಯಾ ಅರುಣ್ ಸನ್ಮಾನಿತರನ್ನು ಪರಿಚಯಿಸಿದರು. ವೇದಿಕೆಯ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

