ಬಂಟ್ವಾಳ : ಧಾರ್ಮಿಕ ಸಂಪ್ರದಾಯ ಹಾಗೂ ಭಕ್ತಿಭಾವದೊಂದಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ಪಾದೆ ಸಜೀಪ ಮುನ್ನೂರು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಗೋಪೂಜೆ ನೆರವೇರಿತು.
ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೋಪೂಜೆ ಜರಗಿತು. ಅರ್ಚಕ ಕೇಶವ ಭಟ್ ಬಿ. ಅವರು ಪೂಜಾ ಕಾರ್ಯಗಳಲ್ಲಿ ಸಹಕರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಕೃಷ್ಣಶಾಮ್, ಸಮಿತಿ ಸದಸ್ಯರಾದ ಯಶವಂತ ಗಟ್ಟಿ, ಗೀತೆ ಶ. ಗಟ್ಟಿ, ಎಂ. ಶಂಕರ ನಾರಾಯಣ ಭಟ್, ಶ್ರೀನಿವಾಸ ಮಯ್ಯ, ದಿನೇಶ್ ಮಯ್ಯ, ದರಣಪ್ಪ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

