ಮಂಜೇಶ್ವರ ಉಪಜಿಲ್ಲಾ ಕಲೋತ್ಸವದ ವಿದ್ಯಾವರ್ಧಕ ಭೋಜನ ಶಾಲೆಗೆ ಚಾಲನೆ

0
15

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮತ್ತು ವಿದ್ಯಾವರ್ಧಕ ಎಯುಪಿ ಶಾಲೆಗಳಲ್ಲಿ ನಡೆಯುತ್ತಿದ್ದು, ಕಲೋತ್ಸವದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅತಿಥಿಗಳ ಅನುಕೂಲಕ್ಕಾಗಿ ಸಿದ್ಧಪಡಿಸಲಾದ ವಿದ್ಯಾವರ್ಧಕ ಭೋಜನ ಶಾಲೆಯನ್ನು ಎಚ್.ಎ.ಎಲ್.ನ ಮಾನವ ಸಂಪನ್ಮೂಲ ನಿರ್ದೇಶಕರಾದ ಬಾಲಸುಬ್ರಹ್ಮಣ್ಯ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಿ.ಎ. ತಾಜುದ್ದೀನ್ , ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕರಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ,ಯುಪಿ ಶಾಲಾ ಆಡಳಿತ ಸಲಹೆಗಾರ ರಾದ ಶ್ರೀಧರ ರಾವ್ ಆರ್ ಎಮ್,ಉಪಜಿಲ್ಲಾ ವಿದ್ಯಾಧಿಕಾರಿ ನಾರಾಯಣ ದೇಲಂಪಾಡಿ ಸೇರಿದಂತೆ ಹಲವಾರ ಗಣ್ಯರು ಉಪಸ್ಥಿತರಿದ್ದರು.