ಕಕ್ಕರಗೊಳ್ಳದ ವಿದ್ಯಾರ್ಥಿ ನಿಲಯದಲ್ಲಿ ಸಾಮೂಹಿಕ ಇಷ್ಟಲಿಂಗ ದೀಕ್ಷೆ

0
7

ದಾವಣಗೆರೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಕಕ್ಕರಗೊಳ್ಳ ಗ್ರಾಮದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಮತ್ತು ಪ್ರಾತ್ಯಕ್ಷಿಕೆ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಎಲ್ಲಾ ಸಮುದಾಯದ ನಲವತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿ ಇಷ್ಟಲಿಂಗ ದೀಕ್ಷೆ ಪಡೆದುಕೊಂಡರು.

ಸಿರುಗುಪ್ಪದ ಶ್ರೀ ಬಸವರಾಜಪ್ಪ ವೆಂಕಟಾಪುರ ಶರಣರು ವಿದ್ಯಾರ್ಥಿನಿಯರಿಗೆ ಲಿಂಗದೀಕ್ಷೆ ನೆರವೇರಿಸಿ ಮಾತನಾಡುತ್ತಾ ಇಂದಿನಿAದ ನೀವೆಲ್ಲರೂ ಜಾತ್ಯತೀತ ಸಿದ್ಧಾಂತ ಹೊಂದಿರುವ ಲಿಂಗಾಯತರಾಗಿರುವಿರಿ, ಯಾವುದೇ ಜಾತಿ ಮತ್ತು ಲಿಂಗ ಬೇಧವಿಲ್ಲದೇ ಯಾರು ಬೇಕಾದರೂ ಲಿಂಗ ಧರಿಸಬಹುದು ಎಂದು ಹೇಳಿದರು.
ಕಾರ್ಯಕ್ರಮವನ್ನು ಶಾಂತರಾಜು ಗೌಡ್ರು ಉದ್ಘಾಟಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಸ್ ಬಿ ರುದ್ರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರೆ ನಿವೃತ್ತ ಪ್ರಾಚಾರ್ಯ ರಾಜಶೇಖರಪ್ಪ ಲಿಂಗಾನುಭಾವದ ನುಡಿಗಳನ್ನಾಡಿದರು. ಎಂ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ವನಜಾ ನಾಗರಾಜ್ ವಚನ ಪ್ರಾರ್ಥನೆ ಮಾಡಿದರು.

ಸರಿತಾ ಶಿವನಳ್ಳಿ ರಮೇಶ್ ಮತ್ತು ಕುಟುಂಬದವರು ಕಾರ್ಯಕ್ರಮದ ದಾಸೋಹಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಬಿ ಎಂ ವಿಶ್ವೇಶ್ವರಯ್ಯ, ನಾಗರಾಜ್ ವಕೀಲರು, ಕಲಿವೀರ್ ಕಳ್ಳೀಮನಿ, ಪ್ರಕಾಶ್ ಕಡ್ಲೇಬಾಳು, ಆವರಗೆರೆ ರುದ್ರಮುನಿ, ಶಾಮನೂರು ಕೊಟ್ರೇಶ್, ಕವಿತಾ ಪೋರಮ್ಮನವರ್, ಮಂಜುನಾಥ್, ಯೋಗೇಶ್, ಸಿದ್ದಯ್ಯ ಮೊದಲಾದವರು ಉಪಸ್ಥಿತರಿದ್ದರು.