ಮಂಗಳೂರು : ನಗರದ ಮೀನುಗಾರಿಕಾ ಬಂದರಿನಲ್ಲಿ ಅಪರೂಪದ ಬೃಹತ್ ಗಾತ್ರದ ಮುಡಾವು ಮೀನು ಪತ್ತೆಯಾಗಿದ್ದು, ಸುಮಾರು 17 ಕೆಜಿ ತೂಕ ಹೊಂದಿತ್ತು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕಾಣಸಿಗುವ ಮುಡಾವು ಮೀನುಗಳಿಗಿಂತ ಗಾತ್ರದಲ್ಲಿ ಬಹಳ ದೊಡ್ಡದಾಗಿದ್ದ ಈ ಮೀನು ಮೀನುಗಾರರ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.
ಈ ಬೃಹತ್ ಮುಡಾವು ಮೀನನ್ನು ಕೆಜಿಗೆ ₹500ರಂತೆ ಒಟ್ಟು ₹8,500ಕ್ಕೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.

