ಎಲ್ಲಾ ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಿಸುವಂತೆ ಸುಜಯ ಪೂಜಾರಿ ಆಗ್ರಹ

0
12

ಕನ್ನಡ ಕನ್ನಡ ಕನ್ನಡ ಕನ್ನಡ ಎನ್ನುವ ಕರ್ನಾಟಕದಲ್ಲಿ ಕನ್ನಡ ಶಾಲೆಯಲ್ಲಿ ಅಧ್ಯಾಪಕರಿಲ್ಲದ ಗತಿ

ಕನ್ನಡ ಎನ್ನುವ ಶಬ್ದವು ಶಾಶ್ವತವಾಗಿ ಉಳಿಯಲು ಕನ್ನಡ ಶಾಲೆಗಳಲ್ಲಿ ಸಾಕಷ್ಟು ಕಾಯಂ ಅಧ್ಯಾಪಕರು ನೇಮಿಸುವಂತೆ ನಮ್ಮ ಕನ್ನಡ ನಾಡು ಸೇನೆಯ ಜಿಲ್ಲಾಅಧ್ಯಕ್ಷರಾದ ಸುಜಯ ಪೂಜಾರಿಯವರು ಬೇಸರ ವ್ಯಕ್ತಪಡಿಸುವುದರೊಂದಿಗೆ ಆಕ್ರೋಶದಿಂದ ಕೂಡಲೇ ಎಲ್ಲಾ ಅಧ್ಯಾಪಕರ ನೇಮಕ ಆಗಲೇಬೇಕು ಒಂದು ಪಕ್ಷ ಇದನ್ನು ರಾಜ್ಯ ಸರ್ಕಾರ ಇದರ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಪ್ರತಿಯೊಂದು ಶಾಲೆ ಎದುರುಗಡೆ ಜಿಲ್ಲಾದಂತ್ಯ ದಿನಕ್ಕೆ ಒಂದು ಶಾಲೆಯಂತೆ ಧರಣಿ ಮಾಡುವುದಾಗಿ ಸರಕಾರಕ್ಕೆ ಎಚ್ಚರ ನೀಡುವುದರೊಂದಿಗೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ .

ಇಂತಹ ಹೋರಾಟಕ್ಕೆ ಅವಕಾಶ ಕೊಡಬಾರದು ಕರ್ನಾಟಕ ಸರಕಾರದ ಶಿಕ್ಷಣ ಸಚಿವರಿಗೂ ಶಿಕ್ಷಣಾಧಿಕಾರಿಗಳಿಗೂ ಹಾಗೂ ಅದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗೆ ಈ ಮೂಲಕ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಕೂಡಲೆ ಎಲ್ಲಾ ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಕ ಮಾಡಬೇಕೆಂದು ಈ ಮೂಲಕ ವಿನಂತಿಸುತ್ತೇವೆ .

ಆಂಗ್ಲ ಭಾಷೆಯ ಬಗ್ಗೆ ನಮಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಕನ್ನಡ ಉಳಿಯಲೇಬೇಕು ಕನ್ನಡಕ್ಕೆ ಹೆಚ್ಚಿನ ಪ್ರಾತಿನಿತ್ಯ ಕೊಡಬೇಕಾಗಿ ವಿನಂತಿ ಕನ್ನಡ ಉಳಿಯಲೇಬೇಕು ಎನ್ನುವುದು ನಮ್ಮ ಮುಖ್ಯ ಧ್ಯೇಯ ಎಂದು ಸುಜಯ ಪೂಜಾರಿ ಆಗ್ರಹಿಸಿದ್ದಾರೆ.