ಕೊಂಪದವುಗುತ್ತು ಧರ್ಮ ಚಾವಡಿಯಲ್ಲಿ ಹಿರಿಯರಾದಿ ಕಾಲದಿಂದ ಆರಾಧಿಸಿಕೊಂಡು ಬರುತ್ತಿರುವ ಧರ್ಮದೈವಗಳಾದ ಶ್ರೀ ಅರಸು ಉಳ್ಳಾಯ, ಧೂಮಾವತಿ ವ್ಯಾಘ್ರ ಚಾಮುಂಡಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವವು ಮೇ 17ಮತ್ತು 18ರಂದು ಜರುಗಲಿದೆ.
ಕಾರ್ಯಕ್ರಮಗಳು: 16-05-2025ನೇ ಶುಕ್ರವಾರ ಬೆಳಿಗ್ಗೆ ಗಂಟೆ 8.00ಕ್ಕೆ ಗಣಪತಿ ಹೋಮ ಮತ್ತು ನಾಗದೇವರಿಗೆ ತಂಬಿಲ ಸೇವೆ .17-05-2025 ಶನಿವಾರ ಬೆಳಿಗ್ಗೆ ಗಂಟೆ 8.00ಕ್ಕೆ ಧರ್ಮಚಾವಡಿಯಲ್ಲಿ ನವಕ ಕಲಶ ಹೋಮ ದೈವ ದರ್ಶನ ಭಂಡಾರ ಇಳಿಯುವುದು. ಬೆಳಿಗ್ಗೆ ಗಂಟೆ 11.00ಕ್ಕೆ ಧರ್ಮ ದೈವ ಶ್ರೀ ಅರಸು ಉಳ್ಳಾಯ ದೈವದ ನೇಮ. ಮಧ್ಯಾಹ್ನ ಗಂಟೆ 1.00ರಿಂದ ಅನ್ನಸಂತರ್ಪಣೆ. ಸಂಜೆ ಗಂಟೆ 4.00ರಿಂದ ಮೈ ಸಂದಾಯ, ನಂದಿಕೋಣ, ಲಕ್ಕೆಸಿರಿ ಮತ್ತು ಸತ್ಯ ಜಾವದೆ ದೈವಗಳ ನೇಮ ನಡೆಯಲಿದೆ. ರಾತ್ರಿ ಗಂಟೆ 8.00ಕ್ಕೆ ಅನ್ನ ಸಂತರ್ಪಣೆ ರಾತ್ರಿ ಗಂಟೆ 8.30ರಿಂದ ಜುಮಾದಿ, ಪಿಲಿಚಾಂಡಿ, ಪಂಜುರ್ಲಿ, ಮರ್ಲ್ ಜುಮಾದಿ, ಬಂಟ ದೈವಗಳ ನೇಮ ಜರುಗಲಿದೆ.
18-05-2025 ನೇ ಆದಿತ್ಯವಾರ ಬೆಳಿಗ್ಗೆ 6.00ಕ್ಕೆ ಭಂಡಾರ ನಿರ್ಗಮನ, ಧರ್ಮ ದೈವಗಳಿಗೆ ಹೋಮ ಕಜ್ಜಾಯ ಸೇವೆ. ಸಂಜೆ ಗಂಟೆ 3.00ಕ್ಕೆ ವರ್ತೆ ಪಂಜುರ್ಲಿ ದೈವಗಳಿಗೆ ಕೋಲ ರಾತ್ರಿ ಗಂಟೆ 8.00ಕ್ಕೆ ದೈವಗಳಿಗೆ ಕುರಿ ತಂಬಿಲ ಸೇವೆ ನಡೆಯಲಿದೆ.