ಸುರತ್ಕಲ್: ಶ್ರೀ ಸಾರಬಳಿ ಧೂಮಾವತಿ ದೈವಸ್ಥಾನ ಪೇಜಾವರ ಮಾಗಣೆ “ಸುಂದಿಬೊಟ್ಟು ಜನರ ಕಾದಬರಿತ ಮಣ್ಣೆ” ಎಂಬ ದೈವ ಜುಮಾದಿಯ ತುಳುವಿನ ಆದಿ ನುಡಿಯಂತೆ ಪೇಜಾವರ ಮಾಗಣೆಯ ಐದು ಗ್ರಾಮಗಳ ಆರಾಧ್ಯ ದೈವಗಳಾಗಿ ಸುಮಾರು 800 ವರ್ಷಗಳಿಗೂ ಮಿಕ್ಕಿದ ಐತಿಹ್ಯದ ಕಾರಣೀಕದೊಂದಿಗೆ ನಂಬಿದ ಭಕ್ತರನ್ನು ನಿಗ್ರಹ-ಅನುಗ್ರಹ ಸಾಕಾರ ಮೂರ್ತಿಯಾಗಿ ಶಾಂತ ಸ್ವರೂಪಿ ದೈವಗಳಾದ ಜುಮಾದಿ-ಜುಮಾದಿ ಬಂಟ ಮಾಗಣೆಯ ಸಕಲರನ್ನು ಸಲಹುತ್ತಿದ್ದಾರೆ.
ಶ್ರೀ ಸಾರಬಳಿ ಧೂಮಾವತಿ ದೈವಸ್ಥಾನ ಪೇಜಾವರ ಮಾಗಣೆಯ ಸಮಗ್ರ ಜೀರ್ಣೋದ್ದಾರದ ಅಂಗವಾಗಿ ದಿನಾಂಕ 09-05-2025 ಬೆಳಿಗ್ಗೆ ಘಂಟೆ 9.46ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಪವಿತ್ರ ಗರ್ಭಗುಡಿಗೆ ವೇದಮೂರ್ತಿ ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರ ನಿರ್ದೇಶನದಲ್ಲಿ ಕಳವಾರು ಲಚ್ಚಿಲ್ ಭಟ್ ಮನೆತನದ ಶ್ರೀ ಅವನೀಶ್ ಭಟ್ ರವರ ಉಪಸ್ಥಿತಿಯಲ್ಲಿ ಹಾಗೂ ಅಂಗಡಿಗುತ್ತು ಶ್ರೀ ವೆಂಕಟರಮಣ ಭಟ್ ಇವರ ನೇತೃತ್ವದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಬೆಳಿಗ್ಗೆ ಗಂಟೆ 10.30ಕ್ಕೆ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥಸ್ವಾಮೀಜಿ ಶ್ರೀ ಪೇಜಾವರ ಮಠ, ಶ್ರೀ ಶ್ರೀ ವಿಧೇಂದ್ರ ತೀರ್ಥಶ್ರೀಪಾದರು, ಚಿತ್ರಾಮರ ಮಠ, ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ, ಗುರುಪುರ, ಶ್ರೀ ಈಶ ವಿಠಲದಾಸ ಸ್ವಾಮೀಜಿ, ಕೇಮಾರು ಮಠ ಧಾರ್ಮಿಕ ಉಪನ್ಯಾಸ ನೀಡಲಿರುವರು.
ವೇದಮೂರ್ತಿ ಶ್ರೀ ವಾಸುದೇವ ಆಸ್ರಣ್ಣರು ಅನುವಂಶಿಕ ಮೊಕ್ತೇಸರರು ಮತ್ತು ಅನುವಂಶಿಕ ಅರ್ಚಕರು ಶ್ರೀ ಕ್ಷೇತ್ರ ಕಟೀಲು, ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರು ಅನುವಂಶಿಕ ಅರ್ಚಕರು, ಶ್ರೀ ಕ್ಷೇತ್ರ ಕಟೀಲು, ವೇದಮೂರ್ತಿ ಶ್ರೀ ಅನಂತಪದ್ಮನಾಭ ಆಸ್ರಣ್ಣರು ಅನುವಂಶಿಕ ಅರ್ಚಕರು, ಶ್ರೀ ಕ್ಷೇತ್ರ ಕಟೀಲು ಆಶೀರ್ವಚನ ನೀಡಲಿರುವರು.
ಗಡಿ ಪ್ರಧಾನರು ದಿವಾಕರ ಆಳ್ವ, ತೋಕೂರುಗುತ್ತು, ರಮೇಶ್ ಚೌಟ, ಪೇಜಾವರ ಚಿಕ್ಕಪರಾರಿ, ಶ್ರೀ ಲಕ್ಷ್ಮಣ ಚೌಟ, ನೆಲ್ಲಿದಡಿಗುತ್ತು
ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾನ್ಯ ಸಂಸದರು, ದ.ಕ. ಲೋಕಸಭಾ ಕ್ಷೇತ್ರ, ಉಮಾನಾಥ ಕೋಟ್ಯಾನ್, ಶಾಸಕರು, ಮೂಲ್ಕಿ, ಮೂಡಬಿದ್ರಿ ಕ್ಷೇತ್ರ, ಮಂಜುನಾಥ ಭಂಡಾರಿ, ಕರ್ನಾಟಕ ವಿಧಾನಸಭಾ ಪರಿಷತ್ ಸದಸ್ಯರು, ಮಲ್ಲಿಕಾ ಪಕ್ಕಳ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ, ಗೋವಿಂದ ನಾಯ್ಕ್ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿ ಇಲಾಖೆ, ದ. ಕ. ಮಂಗಳೂರು, ಕೆ. ಬಾಲಕೃಷ್ಣ ಭಂಡಾರಿ, ಕಮ್ಮಾಜೆ ಬಾಳಿಕೆ ಸುಧಾಕರ ಶೆಟ್ಟಿ, ಮೊಗ್ರೋಡಿ ಕನ್ ಸ್ಟ್ರಕ್ಷನ್ಸ್, ಆನಂದ ಪ್ರಸಾದ ಸಾಮಾನಿ, ದೊಡ್ಡಕಂಬಳಗುತ್ತು ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ಪೊರ್ಕೋಡಿ ದೇವಸ್ಥಾನ, ಮಂಜು ಪೂಜಾರಿ ಅರ್ಚಕರು ಭಂಡಾರಮನೆ, ಮಧುಕರ್ ಕಾಂಚನ್, ಮೊಗವೀರ ಸಭಾ, ಬೈಕಂಪಾಡಿ ಉಪಸ್ಥಿತರಿರಲಿರುವರು.