ಕಾರ್ಕಳ ಬಸ್ ಸ್ಟ್ಯಾಂಡ್ ಗಣೇಶೋತ್ಸವ ಸಮಿತಿ ಸಭೆ

0
5

ಕಾರ್ಕಳ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸ್ ಸ್ಟ್ಯಾಂಡ್ (ರಿ) ಕಾರ್ಕಳ ಇದರ ಆಶ್ರಯದಲ್ಲಿ ಆಚರಿಸಲ್ಪಡುವ 19ನೇ ವರ್ಷದ ಗಣೇಶೋತ್ಸವದ ಪೂರ್ವಭಾವಿ ಸಭೆಯು ಇಂದು ರಾಧಾಕೃಷ್ಣ ಸಭಾಭವನದಲ್ಲಿ ಸಮಿತಿಯ ಸ್ಥಾಪಕಾದ್ಯಕ್ಷರಾದ ಶುಭದರಾವ್ ಅಧ್ಯಕ್ಷತೆಯಲ್ಲಿ ನಡೆಯಿತು.

19ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ದೇವಾಡಿಗ ಮರು ಆಯ್ಕೆಯಾದರು ಮತ್ತು ವಿವಿಧ ಪಧಾಧಿಕಾರಿಗಳನ್ನು ನೇಮಕ‌ ಮಾಡಿ ಅವರಿಗೆ ವಿವಿದ ಜವಾಬ್ದಾರಿಗಳ್ನು ಹಂಚಲಾಯಿತು.

ಗೌರವ ಸಲಹೆಗಾರ ಆದಿರಾಜ ಅಜ್ರಿ ಸಂದರ್ಭೋಚಿತ ‌ಮಾತುಗಳನ್ನಾಡಿ ಉತ್ಸವದ ಭಕ್ತಿ ಪೂರ್ಣ ಆಚರಣೆಗೆ ಮಾರ್ಗದರ್ಶನ ಮಾಡಿದರು.