ಮೆಸ್ಕಾಂ: ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹಕ್ಕೆ ಚಾಲನೆ

0
28

ಮಂಗಳೂರು: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ) ಕ.ವಿ.ಪ್ರ.ನಿ.ನಿ ಹಾಗೂ ವಿದ್ಯುತ್‌ ಪರಿವೀಕ್ಷಣಾ ಇಲಾಖೆ, ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ “ರಾಷ್ಟ್ರೀಯ ವಿದ್ಯುತ್‌ ಸುರಕ್ಷತಾ ಸಪ್ತಾಹದ” ಅಂಗವಾಗಿ ವಿದ್ಯುತ್ ಸುರಕ್ಷತಾ ಸಪ್ತಾಹಕ್ಕೆ ಜೂನ್‌ 26 ರಂದು ಬಿಜೈಯಲ್ಲಿರುವ ಮೆಸ್ಕಾಂ, ಕಾರ್ಪೊರೇಟ್‌ ಕಚೇರಿಯಲ್ಲಿ ಅಯೋಜಿಸಿದ್ದ ಕಾಯ೯ಕ್ರಮದಲ್ಲಿ ಚಾಲನೆ
ನೀಡಲಾಯಿತು.
ಮುಖ್ಯ ಅತಿಥಿಯಾಗಿದ್ದ ಮೆಸ್ಕಾಂ ತಾಂತ್ರಿಕ ನಿರ್ದೇಶಕರಾದ ಕೆ.ಎಂ.ಮಹಾದೇವ ಸ್ವಾಮಿ ಪ್ರಸನ್ನ ಅವರು  ಕರಪತ್ರ  ಬಿಡುಗಡೆ ಮಾಡುವ ಮೂಲಕ ವಿದ್ಯುತ್‌ ಸುರಕ್ಷತಾ ಸಪ್ತಾಹಕ್ಕೆ  ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬ೦ದಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ನಿಯಮಗಳು ಹಾಗೂ ಮಾಗ೯ಸೂಚಿಗಳನ್ನು ಕಟ್ಟನಿಟ್ಟಾಗಿ ಪಾಲಿಸುವ ಮೂಲಕ ವಿದ್ಯುತ್ ಸುರಕ್ಷತೆಯನ್ನು ಕಾಯ್ದುಕೊಳ್ಳಬಹುದಾಗಿದೆ, ಮಾತ್ರವಲ್ಲದೆ ಗುಣಮಟ್ಟದ, ಅಡಚಣೆ ರಹಿತ, ಸುರಕ್ಷಿತ ವಿದ್ಯುತ್‌ ಗ್ರಾಹಕರಿಗೆ ನೀಡಬಹುದಾಗಿದೆ ಎ೦ದರು.

ಅಧ್ಯಕ್ಷತೆ ವಹಿಸಿದ್ದ  ಅಪರಮುಖ್ಯ  ವಿದ್ಯುತ್  ಪರಿವೀಕ್ಷಕರಾದ  ಗಿರೀಶ್ ಜಿ. ಅವರು ಮಾತನಾಡಿ ವಿದ್ಯುತ್‌ ಸುರಕ್ಷತೆಯ ಬಗ್ಗೆವ್ಯಾಪಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವಷ೯ ವಿದ್ಯುತ್‌ ಸುರಕ್ಷತಾ ಸಪ್ತಾಹವನ್ನು ಆಯೋಜಿಸಿಕೊ೦ಡು ಬರಲಾಗುತ್ತಿದೆ. ಶಾಲಾ,ಕಾಲೇಜುಗಳಲ್ಲಿ, ಮಾಲ್‌ಗಳು ಸೇರಿದ೦ತೆ ವಿವಿದೆಡೆ  ಒಂದು ವಾರಗಳ ಕಾಲ  ಕರಪತ್ರ  ಹಾಗೂ ವಿಡಿಯೋ ತುಣುಕುಗಳ ಮೂಲಕ
ವಿದ್ಯುತ್‌ ಸುರಕ್ಷತಾ ಜಾಗೃತಿ ಮೂಡಿಸಲಾಗುವುದು ಎ೦ದು ವಿವರಿಸಿದರು.
ಮುಖ್ಯ ಅಥಿ೯ಕ ಅಧಿಕಾರಿ ಮುರಳೀಧರ ನಾಯಕ್, ಪ್ರಧಾನ ವ್ಯವಸ್ಥಾಪಕರಾದ ಡಾ.ಬಿ.ಎಸ್‌ ಮ೦ಜುನಾಥ ಸ್ವಾಮಿ,ಮ೦ಗಳೂರು ವಲಯ ಮುಖ್ಯ ಎ೦ಜಿನಿಯರ್‌ ರವಿಕಾ೦ತ ಆರ್‌.ಕಾಮತ್‌ ಅತಿಥಿಗಳಾಗಿದ್ದರು.  ಉಪ ಮುಖ್ಯ ವಿದ್ಯುತ್ಪ ರಿವೀಕ್ಷಕರಾದ ಕೆ.ಎಂ.ಕಾಂತರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನ್ಯತೆ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದಪದಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಮೆಸ್ಕಾ೦ ಸಾವ೯ಜನಿಕ ಸ೦ಪರ್ಕಾಧಿಕಾರಿ ವಸ೦ತ ಶೆಟ್ಟಿ ಸ್ವಾಗತಿಸಿದರು, ವಿದ್ಯುತ್‌ ಪರಿವೀಕ್ಷಕರಾದ ಮನೋಜ್‌ ಎಂ. . ಕಾರ್ಯಕ್ರಮ ನಿರೂಪಿಸಿದರು, ವಿರೂಪಣ್ಣವಂದಿಸಿದರು.
ಆರು ಮಂದಿ ವಿದ್ಯುತ್ ತಾಂತ್ರಿಕ ಪರಿಣಿತರಿಗೆ ಸುರಕ್ಷತಾ ಕಿಟ್‌ಗಳನ್ನು ವಿತರಿಸಲಾಯಿತು. ವಿದ್ಯುತ್‌ ಸುರಕ್ಷತಾ ಸಪ್ತಾಹ ಕಾರ್ಯಕ್ರಮವು ಮೆಸ್ಕಾಂ ವ್ಯಾಪ್ತಿಯಲ್ಲಿ ಮುಂದಿನ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.

LEAVE A REPLY

Please enter your comment!
Please enter your name here