ವಿರಾಜಪೇಟೆ :ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘ ಹಾಗೂ ಸಂತ ಅನ್ನಮ್ಮ ದೇವಾಲಯ, ವಿರಾಜಪೇಟೆ ಇವರ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮಾಂತರ ವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಪಂದ್ಯಾವಳಿಯನ್ನು ಉದ್ಘಾಟಿಸಿ ಶುಭ ಹಾರೈಸಿದ ಶಾಸಕರು, ಒಂದು ಸಮುದಾಯದ ಜನರೆಲ್ಲರೂ ಒಂದೆಡೆ ಸೇರಿ ಕ್ರೀಡೆಯನ್ನು ಆಸ್ವಾದಿಸುವುದರ ಜೊತೆಗೆ, ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ನಾಡಿನಾದ್ಯಂತ ಪರಿಚಯಿಸಲು ಇಂತಹ ಪಂದ್ಯಾವಳಿಗಳು ಉತ್ತಮ ವೇದಿಕೆಯಾಗಿವೆ. ವಾಲಿಬಾಲ್ನಂತಹ ಕ್ರೀಡೆಗಳಲ್ಲಿ ಚುರುಕುತನ, ಸಮಯಪ್ರಜ್ಞೆ ಹಾಗೂ ಚಾಣಾಕ್ಷತನ ಅತ್ಯಂತ ಮುಖ್ಯವಾಗಿದ್ದು, ಇವು ಯುವಜನತೆಯ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಮದಲೈ ಮುತ್ತು, ಚೆಸ್ಕಾಂ ಇಲಾಖೆಯ ನಿರ್ದೇಶಕರಾದ ಎ.ಜೆ. ಬಾಬು, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಜೋಕಿಂಗ್ ರಾಡ್ರಿಗಸ್, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ನ ವಿರಾಜಪೇಟೆ ಘಟಕದ ಅಧ್ಯಕ್ಷರಾದ ಆಗಸ್ಟಿನ್, ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ವಿರಾಜಪೇಟೆ ಘಟಕದ ಉಪಾಧ್ಯಕ್ಷರಾದ ರಿಯಾನ್ ಲೋಬೊ, ಪ್ರಮುಖರಾದ ಮರ್ವಿನ್ ಲೋಬೊ, ಆಗಸ್ಟಿನ್ ಬೆನ್ನಿ ಸೇರಿದಂತೆ ಕ್ರೀಡಾ ಆಯೋಜಕರು, ಸಂಘದ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ವರದಿ: ಪ್ರಿತುನ್ ಪೂವಣ್ಣ

