

ಪುತ್ತೂರು : ಕಳೆದ ಒಂದು ತಿಂಗಳಲ್ಲಿ ನಿರಂತರ 1,2,7 ಹೀಗೆ ಹಲವು ಆನೆಗಳ ದಿಂಡು ಪೆರ್ನಾಜೆ ಹಾಗೂ ಸುತ್ತಮುತ್ತ ಕೃಷಿ ಪ್ರದೇಶಕ್ಕೆ ಬರುತ್ತಾ ಇದ್ದು ಇಂದು ಬೆಳಗಿನ ಜಾವ ಕೃಷಿಕರಾದ ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಹತ್ತಕ್ಕೂ ಮಿಕ್ಕಿ ಬಾಳೆಗಿಡಗಳನ್ನು ಹಾಗೂ ಅಡಿಕೆ ಸಸಿ ನಾಶಪಡಿಸಿ ಕಾಡಾನೆ ನೂಜಿಬೈಲು ಕಡೆಗೆ ತೆರಳಿರಬಹುದು ಎಂದು ಪ್ರಗತಿಪರ ಕೃಷಿಕ ಕುಮಾರ್ ಪೆರ್ನಾಜೆ ಮಾಹಿತಿ ನೀಡಿದ್ದಾರೆ.
