ಮೋದಿ ಜನ್ಮದಿನದ ಪ್ರಯುಕ್ತ ಅನಂತೋಡಿ ದೇವಸ್ಥಾನದಲ್ಲಿ ತುಪ್ಪದೀಪ ಸೇವೆ

0
4

ಬೆಳಾಲು : ಪ್ರಧಾನಿ ನರೇಂದ್ರ ಮೋದಿಜೀಯವರ ಹುಟ್ಟುಹಬ್ಬದ ಪ್ರಯುಕ್ತ ರಾಷ್ಟ್ರವ್ಯಾಪಿ ಆಶೀರ್ವಾದದ ದೀಪ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಬೆಳಾಲು ಗ್ರಾಮದ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸೆ 17 ರಂದು ಮೋದಿಯವರಿಗೆ ದೀರ್ಘಾಯುಷ್ಯ ಅರೋಗ್ಯ, ದೇಶವನ್ನು ಇನ್ನಷ್ಟು ವರ್ಷಗಳ ಕಾಲ ಮುನ್ನಡೆಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ವಿಶೇಷ ಸಂಕ್ರಮಣ ಪೂಜೆಯ ಸಮಯದಲ್ಲಿ ಸಾಮೂಹಿಕವಾಗಿ ತುಪ್ಪದ ದೀಪ ಬೆಳಗಿಸಿ ವಿಶೇಷ ಪ್ರಾರ್ಥನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅಸ್ರಣ್ಣರಾದ ಗಿರೀಶ್ ಬಾರಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ಗೌಡ ಶ್ರೀ ಸೌಧ ಬೆಳಾಲು, ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕೆರ್ಮುಣ್ಣಾಯ, ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ, ಬಿಜೆಪಿ ಜಿಲ್ಲಾ ಮನ್ ಕೀ ಬಾತ್ ಸಂಯೋಜಕರಾದ ಸೀತಾರಾಮ್ ಬಿ ಎಸ್,ಉಪಾಧ್ಯಕ್ಷರಾದ ಶ್ರೀಮತಿ ಮಮತಾ ದಿನೇಶ್ ಪೂಜಾರಿ ಉಪ್ಪಾರು, ಬೆಳ್ತಂಗಡಿ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ, ಪ್ರಮುಖರಾದ ರಂಜಿತ್ ಉಪ್ಪಾರು,ಯಶೋಧರ ಗೌಡ ಅಳಕ್ಕೆದಡ್ಡ,ರಾಜೇಶ್ ಗೌಡ ಪಾರಳ, ದಿನೇಶ್ ದರ್ಖಾಸ್, ಯಶೋಧರ ಅನಂತೋಡಿ, ಶಿವಪ್ರಸಾದ್ ಹಾಗೂ ಮೋದಿಜೀ ಅಭಿಮಾನಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.